ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ; ರಸ್ತೆಯ ಮೇಲೆ ಶಾಲಾ ಮಕ್ಕಳು ಹಾಗೂ ವೃದ್ದರು ಸಂಚರಿಸುತ್ತಾರೆ, ಅತಿಯಾದ ವೇಗದಿಂದ ವಾಹನ ಚಾಲನೆ ಮಾಡುವುದರಿಂದ ಅಪಘಾತಕ್ಕೆ ಅಹ್ವಾನ ನೀಡಿದಂತಾಗುತ್ತದೆ, ವಾಹನ ನಿಧಾನವಾಗಿ ಚಲಿಸಿ ಜನರ ಜೀವ ಉಳಿಸಿ ಎಂದು ಪಿಎಸ್ ಐ ಶಿವಾನಂದ ಗುಡಗನಟ್ಟಿ ಎಚ್ಚರಿಕೆ ನೀಡಿದ್ದಾರೆ.
ಅವರು ಪಟ್ಟಣದ ಪೋಲಿಸ್ ಠಾಣೆ ಆವರಣದಲ್ಲಿ ಖಾಸಗಿ ವಾಹನದ ಮಾಲಿಕರ ಹಾಗೂ ವಾಹನದ ಚಾಲಕರ ಜಾಗೃತಿ ಸಭೆಯಲ್ಲಿ ಮಾತನಾಡಿದರು.
ವಯಸ್ಕರಲ್ಲದವರಿಗೆ ಹಾಗೂ ಚಾಲನಾ ಪತ್ರರಹಿತ ಚಾಲಕರಿಗೆ ವಾಹನ ಚಲಾಯಿಸಲು ನೇಮಕಮಾಡಿಕೊಂಡಲ್ಲಿ ವಾಹನದ ಮಾಲಿಕರಿಗೆ ದುಬಾರಿ ದಂಡವಿಧಿಸಲಾಗುತ್ತಿದೆ, ವಾಹನ ಚಾಲಕರು ಕಡ್ಡಾಯವಾಗಿ ಚಾಲನಾ ಪರವಾನಗಿ ಹೊಂದಿರಬೇಕು.
ಜೊತೆಗೆ ವಾಹನಗಳ ವಿಮೆ ಮಾಡಿಸಬೇಕು. ಮದ್ಯ ಸೇವನೆ ಮಾಡುತ್ತಿರುವ ಚಾಲಕರನ್ನು ನೇಮಿಸಿಕೊಳ್ಳಬಾರದು. ರಸ್ತೆ ನಿಯಮಗಳ ವಿರುದ್ದ ನಡೆದುಕೊಂಡರೆ ಕಾನಾನ್ಮಾತಕವಾಗಿ ದಂಡ ವಿಧಿಸಲಾಗುತ್ತಿದೆ.
ದಾಖಲೆಗಳಿಲ್ಲದ ವಾಹನಗಳನ್ನು ಪರೀಕ್ಷಿಸಿದಾಗ ಪ್ರತಿಷ್ಠಿತ ವ್ಯಕ್ತಿಗಳಿಂದ ಹೇಳಿಸುವುದನ್ನು ಮಾಡಬಾರದು. ಕಾನೂನಿಡಿ ಎಲ್ಲರೂ ಒಂದೇ ಸಂಚಾರ ನಿಯಮಗಳನ್ನು ಪಾಲಿಸಿ ಅಪಘಾತಗಳನ್ನು ತಡೆಯೋಣ ಎಂದು ಕಿವಿಮಾತು ಹೇಳಿದರು.
ಪ್ರೋ.ಪಿಜಿ ಕೊಣ್ಣೂರ ಮಾತನಾಡಿ, ಸಂಚಾರ ಸುವ್ಯವಸ್ಥೆ ತರುವ ನಿಟ್ಟಿನಲ್ಲಿ ಸಾರಿಗೆ ಇಲಾಖೆಯ ನಿಯಗಳನ್ನು ಬಿಗಿಗೊಳಿಸಲಾಗಿದೆ, ನಿಯಮಗಳನ್ನು ಪಾಲಿಸಿ ಸಹಕಾರ ನೀಡುವುದು ವಾಹನ ಮಾಲೀಕರ ಹಾಗೂ ಚಾಲಕರ ಕರ್ತವ್ಯವಾಗಿದೆ ಎಂದು ಹೇಳಿದರು.
ಪೋಲಿಸ್ ಸಿಬ್ಬಂದಿ ವಾಹನಗಳ ಮಾಲೀಕರು, ಚಾಲಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ