ಪ್ರಗತಿವಾಹಿನಿ ಸುದ್ದಿ, ಕೀವ್: ರಷ್ಯಾದ ಮಹಿಳೆಯೊಬ್ಬರನ್ನು ಉಕ್ರೇನಿಯನ್ ತನಿಖಾ ಸಂಸ್ಥೆಗಳು ವಾಂಟೆಡ್ ಪಟ್ಟಿಗೆ ಸೇರಿಸಿವೆ.
ಓಲ್ಗಾ ಬೈಕೊವ್ಸ್ಕಯಾ ವಾಂಟೆಡ್ ಪಟ್ಟಿಗೆ ಸೇರ್ಪಡೆಯಾದ ಮಹಿಳೆ. ಇಷ್ಟಕ್ಕೂ ಈಕೆ ಮಾಡಿದ್ದೇನು?
ಈಕೆಯ ಪತಿ ರೋಮನ್ ಬೈಕೊವ್ಸ್ಕಿ(27) ರಷ್ಯಾದ ಸೈನಿಕ. ಈತನಿಗೆ ಉಕ್ರೇನಿಯನ್ ಮಹಿಳೆಯರ ಮೇಲೆ ಅತ್ಯಾಚಾರ ಮಾಡುವಂತೆ ಓಲ್ಗಾ ಬೈಕೊವ್ಸ್ಕಯಾ ಹೇಳಿದ್ದಾರಂತೆ. ಹೀಗಾಗಿಯೇ ಅವರನ್ನು ಉಕ್ರೇನಿಯನ್ ತನಿಖಾ ಸಂಸ್ಥೆಗಳು ರಾಜ್ಯ, ಅಂತರ-ರಾಜ್ಯ ಮತ್ತು ಅಂತಾರರಾಷ್ಟ್ರೀಯ ವಾಂಟೆಡ್ ಪಟ್ಟಿಗೆ ಸೇರಿಸಿವೆ.
“ಅಲ್ಲಿ ಉಕ್ರೇನಿಯನ್ ಮಹಿಳೆಯರಿದ್ದಾರೆ. ಅವರ ಮೇಲೆ ಅತ್ಯಾಚಾರ ಮಾಡಿ, ನನಗೆ ಏನನ್ನೂ ಹೇಳಬೇಡಿ, ಅರ್ಥಮಾಡಿಕೊಳ್ಳಿ … ಹೌದು, ನಾನು ನಿಮಗೆ ಅವಕಾಶ ನೀಡುತ್ತೇನೆ. ಅತ್ಯಾಚಾರ ಮಾಡುವಾಗ ಮುನ್ನೆಚ್ಚರಿಕೆ ಕ್ರಮ ಬಳಸಿ,” ಎಂದು ತನ್ನ ಪತಿಗೆ ಓಲ್ಗಾ ಬೈಕೊವ್ಸ್ಕಯಾ ಹೇಳಿದ್ದಾರೆನ್ನಲಾಗಿದೆ.
ರೇಡಿಯೊ ಲಿಬರ್ಟಿಯಲ್ಲಿನ ತನಿಖಾ ಪತ್ರಕರ್ತರು ಉಕ್ರೇನಿಯನ್ ಕಾನೂನು ಜಾರಿಯೊಂದಿಗೆ ಕೆಲಸ ಮಾಡುವಾಗಈ ಫೋನ್ ಕರೆಯನ್ನು ಟ್ರ್ಯಾಕ್ ಮಾಡಿದ್ದಾರೆ. ಸಂಭಾಷಣೆ ನಡೆದ ಮೊಬೈಲ್ ಸಂಖ್ಯೆಗಳಲ್ಲಿ ಒಂದನ್ನು ಏಪ್ರಿಲ್‌ನಲ್ಲಿ ಖೆರ್ಸನ್ ಪ್ರದೇಶದಲ್ಲಿ ಪತ್ತೆ ಮಾಡಲಾಗಿದೆ.
ನಂತರ, ಹೆಚ್ಚಿನ ತನಿಖೆಯಿಂದ ಎರಡು ಫೋನ್ ಸಂಖ್ಯೆಗಳು ರಷ್ಯಾದ ವಿ ಕನೆಕ್ಟ್ ಸಾಮಾಜಿಕ ಜಾಲತಾಣಕ್ಕೆ ಲಿಂಕ್ ಮಾಡಿದಾಗ ಈ ಪೈಕಿ ಒಂದು ಸಂಖ್ಯೆ ರೋಮನ್ ಬೈಕೊವ್ಸ್ಕಿ (27) ಮತ್ತು ಇನ್ನೊಬ್ಬರು ಅವರ ಪತ್ನಿ ಓಲ್ಗಾ ಬೈಕೊವ್ಸ್ಕಯಾ ಅವರಿಗೆ ಸೇರಿದ್ದು ಎಂಬುದು ಪತ್ತೆಯಾಯಿತು.
https://pragati.taskdun.com/cm-basavaraj-bommaaicovid-case-increasenew-yersguidline/
*ಲೈಂಗಿಕ ಕಿರುಕುಳ; ಪ್ರೊ.ಡಾ.ಚಾಂದ್ ಭಾಷಾ ಸಸ್ಪೆಂಡ್*
https://pragati.taskdun.com/sexual-harassmentproffeser-suspendshrikrishna-devaraya-univercity/
*ಕಂದಕಕ್ಕೆ ಬಿದ್ದ ಕಾರು; 8 ಅಯ್ಯಪ್ಪ ಭಕ್ತರು ದುರ್ಮರಣ*
https://pragati.taskdun.com/car-accident8-ayyappa-devoteesdeathkerala-tamilnadu-border/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ