
ಪ್ರಗತಿವಾಹಿನಿ ಸುದ್ದಿ: ದಂತವೈದ್ಯನೊಬ್ಬನನ್ನು ದುಷ್ಕರ್ಮುಗಳು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಅಮೆರಿಕಾದ ಡಲ್ಲಾಸ್ ನಲ್ಲಿ ನಡೆದಿದೆ.
ಭಾರತ ಮೂಲದ ದಂತ ವೈದ್ಯನನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಹೈದರಾಬಾದ್ ಮೂಲದ ಚಂದ್ರಶೇಖರ್ ಪೋಲ್ ಹತ್ಯೆಗೀಡಾದ ದುರ್ದೈವಿ.
ಗ್ಯಾಸ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ದಾಳಿ ನಡೆಸಿದ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆಗೈದಿದ್ದಾರೆ. ಮೃತದೇಹವನ್ನು ಹೈದರಾಬಾದ್ ಗೆ ತರಲು ಸರ್ಕಾರ ಕ್ರಮಕೈಗೊಂಡಿದೆ.