Kannada NewsKarnataka NewsLatest

ಮಂಗಳವಾರ ಬೆಳಗಾವಿಯಲ್ಲಿ ವೈದ್ಯರ ದಿಢೀರ್ ಮುಷ್ಕರ: ಓಪಿಡಿ ಬಂದ್

ಸೋಮವಾರ ರಾತ್ರಿ ಸಭೆ ಸೇರಿದ್ದ ವೈದ್ಯರ ನಿರ್ಧಾರ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮಂಗಳವಾರ ಬೆಳಗಾವಿಯಲ್ಲಿ ವೈದ್ಯರು ಮುಷ್ಕರಕ್ಕೆ ಕರೆ ನೀಡಿದ್ದಾರೆ.

Home add -Advt

ಇಂಡಿಯನ್ ಮೆಡಿಕಲ್ ಅಸೋಸಿಯೇಶನ್  ಸದಸ್ಯರು ಈಗ ಸ್ವಲ್ಪ ಹೊತ್ತಿನ ಮೊದಲು ತುರ್ತು ಸಭೆ ನಡೆಸಿ ಮಂಗಳವಾರ ಸಂಪೂರ್ಣ ಓಪಿಡಿ ಬಂದ್ ಮಾಡಲು ನಿರ್ಧರಿಸಿದ್ದಾರೆ. ಕೇವಲ ಎಮರ್ಜನ್ಸಿ ಕೇಸ್ ಗಳನ್ನು ಮಾತ್ರ ಅಟೆಂಡ್ ಮಾಡಲಿದ್ದಾರೆ.

ಐಎಂಎ ಅಧ್ಯಕ್ಷ ಡಾ. ಅನಿಲ ಪಾಟೀಲ ಹಾಗೂ ಕಾರ್ಯದರ್ಶಿ ಡಾ.ದೇವೇಗೌಡ ಪ್ರಗತಿವಾಹಿನಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ.

ಸೋಮವಾರ ಕ್ಷುಲ್ಲಕ ಕಾರಣಕ್ಕಾಗಿ ಡಾ.ರೋಹಿತ್ ಜೋಶಿ ಅವರ ಮೇಲೆ ರೋಗಿಯೋರ್ವ ಹಲ್ಲೆ ನಡೆಸಿದ್ದಾರೆ. ಈ ಹಲ್ಲೆ ಪ್ರತಿಭಟಿಸಿ ಮಂಗಳವಾರ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಖಡೇ ಬಜಾರ್ ಪೊಲೀಸ್ ಠಾಣೆಯಲ್ಲಿ ಹಲ್ಲೆ ಕುರಿತು ದೂರು ದಾಖಲಿಸಲಾಗಿದೆ. ಮಂಗಳವಾರ ಪ್ರತಿಭಟನೆ ನಡೆಸಲಿರುವ ವೈದ್ಯರು ಜಿಲ್ಲಾಧಿಕಾರಿ ಮತ್ತು ಪೊಲೀಸ್ ಆಯುಕ್ತರಿಗೆ ಮನವಿಯನ್ನೂ ಸಲ್ಲಿಸಲಿದ್ದಾರೆ.

Related Articles

Back to top button