ದೇಶದಾದ್ಯಂತ ನಾಳೆ ವೈದ್ಯರ ಮುಷ್ಕರ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:
ಕಿರಿಯ ವೈದ್ಯನ ಮೇಲೆ
ಕೋಲ್ಕತ್ತಾದಲ್ಲಿ ಜೂನ್ 10ರಂದು ನಡೆದ ಹಲ್ಲೆ ಖಂಡಿಸಿ ನಾಳೆ ವೈದ್ಯರು ದೇಶವ್ಯಾಪಿ ಮುಷ್ಕರ ನಡೆಸಲಿದ್ದು, ಎಲ್ಲ ಖಾಸಗಿ ಆಸ್ಪತ್ರೆ ಬಂದ್ ಆಗಲಿದೆ. ಬಂಗಾಳದ ವೈದ್ಯರಿಗೆ ಬೆಂಬಲ ಸೂಚಿಸಿ, ಕರ್ನಾಟಕದಲ್ಲೂ ಖಾಸಗಿ ಆಸ್ಪತ್ರೆ ವೈದ್ಯರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಭಾರತೀಯ ವೈದ್ಯಕೀಯ ಸಂಘ( ಐಎಂಎ) ಕರೆ ಕೊಟ್ಟ ಪ್ರತಿಭಟನೆಗೆ ವೈದ್ಯರು ಸಾಥ್ ನೀಡಿದ್ದಾರೆ.

ನಾಳೆ ಬೆಳಗ್ಗೆ 6 ರಿಂದ ಜೂನ್ 18ರ ಬೆಳಗ್ಗೆ 6 ಗಂಟೆ ತನಕ ವೈದ್ಯರು ಪ್ರತಿಭಟನೆ ನಡೆಸಲಿದ್ದು, ಓಪಿಡಿ ಸೇವೆ ಸ್ಥಗಿತಗಳಿಸಿ ಪ್ರತಿಭಟನೆಗೆ ಮುಂದಾಗಲು ವೈದ್ಯರು ನಿರ್ಧರಿಸಿದ್ದಾರೆ.

Home add -Advt

ಇನ್ನು ವೈದ್ಯರ ಮುಷ್ಕರ ಹಿನ್ನೆಲೆ, ಆರೋಗ್ಯ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದ್ದು, ಸರ್ಕಾರಿ ಆಸ್ಪತ್ರೆ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಕೀಯ ಸೇವೆಯಲ್ಲಿ ವ್ಯತ್ಯಯ ಆಗದಂತೆ ನೋಡಿಕೊಳ್ಳಲು ಸೂಚನೆ ನೀಡಲಾಗಿದೆ. ಅಲ್ಲದೇ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ನಾಳೆ ರಜೆ ನೀಡದಂತೆ ಸೂಚನೆ ನೀಡಲಾಗಿದೆ.

Related Articles

Back to top button