
ಪ್ರಗತಿವಾಹಿನಿ ಸುದ್ದಿ: ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ಮನುಷತ್ಯ, ಮಾನವೀಯತೆಯನ್ನೇ ಮನುಷ್ಯ ಜೀವಿ ಕಳೆದುಕೊಂಡು ವಿಕೃತಿಯೆಡೆಗೆಸಾಗುತ್ತಿರುವಂತಿದೆ. ಇಲ್ಲೋರ್ವ ಕಾಮುಕ ಒಂದುವರೆ ವರ್ಷದ ಪುಟ್ಟ ಕಂದನ ಮೇಲೆ ಅತ್ಯಾಚಾರವೆಸಗಿರುವ ಘಟನೆ ನಡೆದಿದೆ.
ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಗ್ರಾಮವೊಂದಲ್ಲಿ ಕಂದಮ್ಮನ ಮೇಲೆ ವಿಕೃತಿ ಮೆರೆದಿದ್ದು, ಮಗುವಿನ ಮೇಲೆ ಅತ್ಯಾಚಾರವೆಸಗಿರುವ ಕುರುಹುಗಳು ಪತ್ತೆಯಾಗಿದ್ದು, ವಿಷಯ ತಿಳಿಯುತ್ತಿದ್ದಂತೆ ಮನೆಯವರು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆದರೆ ಮಗು ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದೆ. ನರೋಣಾ ಪೊಲಿಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ಹಾಗೂ ಕೊಲೆ ಕೇಸ್ ದಾಖಲಾಗಿದೆ.