Kannada News

ಮಕ್ಕಳೇ ಮೊಬೈಲ್ ದಾಸರಾಗದಿರಿ: ಅರವಿಂದ ಹುನಗುಂದ

ಮಕ್ಕಳೇ ಮೊಬೈಲ್ ದಾಸರಾಗದಿರಿ: ಅರವಿಂದ ಹುನಗುಂದ

ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಇಂದಿನ ತಾಂತ್ರಿಕ ಯುಗದಲ್ಲಿ ಹೊರಜಗತ್ತಿನ ಅರಿವು ಮಕ್ಕಳಲ್ಲಿ ಕಡಿಮೆಯಾಗುತ್ತಲಿದೆ. ಏಕೆಂದರೆ ಜಗತ್ತೆ ಮನೆ ಒಳಗೆ ಬಂದಿದೆ. ಕೇವಲ ಕಂಪ್ಯೂಟರ್, ಮೊಬೈಲ್‌ಗಳ ದಾಸರಾಗದೇ ಕ್ರೀಡೆ, ಸಂಗೀತ ಸಾಹಿತ್ಯಗಳ ಸಾಂಸ್ಕೃತಿಕ ಜಗತ್ತಿನತ್ತಲೂ ನಿಮ್ಮ ಒಲವನ್ನು ಹರಿಬಿಡಿ. ಮಕ್ಕಳೇ ಮೊಬೈಲ್ ದಾಸರಾಗಬೇಡಿ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ನಿವೃತ್ತ ಅಧಿಕಾರಿ ಅರವಿಂದ ಹುನಗುಂದ ಇಂದಿಲ್ಲಿ ಹೇಳಿದರು.

ನಗರದ ಇಂಟ್ರ್ಯಾಕ್ಟ್ ಕ್ಲಬ್ ಆಫ್ ಬಿ. ಕೆ. ಮಾಡೆಲ್ ಹೈಸ್ಕೂಲ್ -2019-20 ಸಾಲಿನ ಅನುಸ್ಥಾಪನ ಸಮಾರಂಭವನ್ನು ರೋಟರಿ ಕ್ಲಬ್ ಆಫ್ ಬೆಳಗಾವಿ ಇವರ ಪ್ರಾಯೋಜಕತ್ವದಲ್ಲಿ ಶಾಲೆಯ ಧರ್ಮಾಜಿ ಅನಿಗೋಳ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅರವಿಂದ ಹುನಗುಂದ ಮಕ್ಕಳನ್ನು ಉದ್ದೇಶಿಸಿ ಮಕ್ಕಳಲ್ಲಿ ಅರಿವು ಮೂಡಿಸಿದರು.

ಅನುಸ್ಥಾಪನ ಅಧಿಕಾರಿ ರೊ. ಸಚಿನ್ ಬಿಚ್ಚು, ಮಕ್ಕಳು ಶಾಲಾ ಅಭ್ಯಾಸದೊಂದಿಗೆ ಸಮಾಜ ಸೇವೆಯತ್ತಲೂ ಗಮನ ಕೊಡಬೇಕು. ಮಕ್ಕಳು ಸಮಾಜ ಸೇವೆಯನ್ನು ಮೈಗೂಡಿಸಿಕೊಂಡಾಗ ನಿಸ್ವಾರ್ಥ ಮನೋಭಾವ ಬೆಳೆಯಲು ಸಾಧ್ಯ ಎಂದು ಹೇಳಿ ತಮ್ಮ ಸಂಸ್ಥೆಯ ಧ್ಯೆಯೋದ್ಧೇಶಗಳ ಕುರಿತು ತಿಳಿಸಿಕೊಟ್ಟರು.

ಮಂದಾರ ದೇಶಪಾಂಡೆ ಅಧ್ಯಕ್ಷರಾಗಿ, ಗುರುರಾಜ ಚವ್ಹಾಣ ಕಾರ್ಯದರ್ಶಿಗಳಾಗಿ ಪ್ರಸಕ್ತ ಸಾಲಿನಲ್ಲಿ ಆಯ್ಕೆಯಾದರು.
ರೋಟರಿ ಕ್ಲಬ್ ಆಫ್ ಬೆಳಗಾವಿ ಅಧ್ಯಕ್ಷರಾದ ಜೀವನ ಖಟಾವ, ಕಾರ್ಯದರ್ಶಿಗಳಾದ  ಪ್ರಮೋದ ಅಗರವಾಲ, ಬೆಳಗಾವಿ ಯುವಸೇವೆ ನಿರ್ದೇಶಕರಾದ ವಿಶಾಲ ಪಟ್ಟಣಶೆಟ್ಟಿ, ಇವೆಂಟ್ ಇಂಟ್ರ್ಯಾಕ್ಟ್ ಅಧ್ಯಕ್ಷರಾದ ಡಾ. ಮನಿಷಾ ಹರೇಕರ ಆಗಮಿಸಿದ್ದರು.
ರಿತೀಶ ಅಗಸಿಮನಿ, ನಿಖಿಲ ಪಟಗುಂದಿ,  ಡಿ.ಪಿ. ಪಾಟೀಲ, ಶಾಲಾ ಮುಖ್ಯೋಪಾಧ್ಯಾಯರಾದ ಎ. ಎಸ್. ದೇಸಾಯಿ ಉಪಸ್ಥಿತರಿದ್ದರು.////

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button