Kannada NewsUncategorized

5 ವರ್ಷಕ್ಕೊಮ್ಮೆ ಬಂದು ಹೋಗುವವರಿಗೆ ಮಣೆ ಹಾಕಬೇಡಿ – ಬಾಲಚಂದ್ರ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ, ಗೋಕಾಕ: ಮೇ-೧೦ ರಂದು ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಿದ್ದು, ಜನಸೇವೆಗೆ ಮತ್ತೊಮ್ಮೆ ಬಿಜೆಪಿಯನ್ನು ಬೆಂಬಲಿಸಿ ಆಶೀರ್ವಾದ ಮಾಡುವಂತೆ ಅರಭಾವಿ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮತದಾರರಲ್ಲಿ ಮನವಿ ಮಾಡಿದರು.
ತಾಲೂಕಿನ ಕೌಜಲಗಿ ಪಟ್ಟಣದಲ್ಲಿ ಬುಧವಾರ ಸಂಜೆ ಜರುಗಿದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಮತಯಾಚಿಸಿ ಮಾತನಾಡಿದ ಅವರು, ಸತತ ೬ನೇ ಬಾರಿಗೆ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿರುವುದಾಗಿ ಅವರು ಹೇಳಿದರು.
ಈ ಚುನಾವಣೆಯಲ್ಲಿ ಅಭಿವೃದ್ದಿ ತತ್ವದಡಿ ಮತಯಾಚಿಸುತ್ತಿರುವೆ. ಅರಭಾವಿ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ದಿ ಪಡಿಸಲು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದೇನೆ. ಆದರೆ ಬೇರೆಯವರಂತೆ ವಿನಾ ಕಾರಣ ಟೀಕಿಸಿ ಮತ ಕೇಳುತ್ತಿಲ್ಲ. ಅರಭಾವಿ ಕ್ಷೇತ್ರದಲ್ಲಿ ಎಲ್ಲದರಲ್ಲೂ ಪ್ರಗತಿ ಸಾಧಿಸಲಾಗಿದೆ. ಶಿಕ್ಷಣ, ನೀರಾವರಿ, ರಸ್ತೆ, ಕುಡಿಯುವ ನೀರು, ಆರೋಗ್ಯ ಮುಂತಾದ ಕ್ಷೇತ್ರಗಳಿಗೆ ಪ್ರಮುಖ ಆದ್ಯತೆ ನೀಡಿದ್ದೇನೆ. ಅದರಲ್ಲೂ ಕೌಜಲಗಿ ಭಾಗದ ರೈತರ ಪ್ರಮುಖ ಬೇಡಿಕೆಯಾಗಿದ್ದ ಕಲ್ಮಡ್ಡಿ ಏತ ನೀರಾವರಿ ಯೋಜನೆಯನ್ನು ಲೋಕಾರ್ಪಣೆ ಮಾಡುವ ಮೂಲಕ ರೈತ ಬಾಂಧವರಿಗೆ ಅನುಕೂಲ ಮಾಡಿಕೊಟ್ಟಿದ್ದೇನೆ. ಜೊತೆಗೆ ಶಿಕ್ಷಣ ಕ್ಷೇತ್ರದಲ್ಲೂ ಗಣನೀಯ ಸೇವೆ ಮಾಡಿದ್ದೇನೆಂದು ಅವರು ತಿಳಿಸಿದರು.
ಕ್ಷೇತ್ರದಲ್ಲಿ ಸಣ್ಣ-ಸಣ್ಣ ಸಮಾಜಗಳನ್ನು ಕ್ರೋಢಿಕರಿಸಲು ಪ್ರಾಮಾಣಿಕ ಸೇವೆ ಮಾಡಿದ್ದೇನೆ. ಎಲ್ಲ ಸಮಾಜಗಳಲ್ಲೂ ಪರಸ್ಪರ ಪ್ರೀತಿ ವಿಶ್ವಾಸವನ್ನು ಮೂಡಿಸಲು ಪ್ರಯತ್ನಿಸಿದ್ದೇನೆ. ಜೊತೆಗೆ ಎಲ್ಲ ಸಮಾಜಗಳಿಗೆ ರಾಜಕೀಯ ಪ್ರಾತಿನಿಧ್ಯ ನೀಡಿದ್ದೇನೆ. ಸರ್ವ ಸಮಾಜಗಳ ನಾಗರೀಕರು ಸಹ ನನ್ನನ್ನು ಒಬ್ಬ ಶಾಸಕನನ್ನಾಗಿ ನೋಡದೇ ತಮ್ಮ ಮನೆಯ ಮಗನಂತೆ ನೋಡುತ್ತಾ ಆಗಾಧ ಪ್ರೀತಿ ವಿಶ್ವಾಸವನ್ನು ತೋರುತ್ತಿದ್ದಾರೆ. ಕ್ಷೇತ್ರದ ಎಲ್ಲ ಮತದಾರ ಪ್ರಭುಗಳಿಗೆ ನಾನು ಆಭಾರಿಯಾಗಿದ್ದೇನೆಂದು ಅವರು ಹೇಳಿದರು.
ರಾಜ್ಯದಲ್ಲಿ ಅರಭಾವಿ ಮತಕ್ಷೇತ್ರವನ್ನು ಇನ್ನಷ್ಟು ಅಭಿವೃದ್ದಿಪಡಿಸಬೇಕಿದೆ. ಅದಕ್ಕಾಗಿ ಈ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಿದ್ದೇನೆ. ಕೆಲವರು ಅಧಿಕಾರ ಇಲ್ಲದೆಯೇ ಏನೇನೋ ಮಾತನಾಡುತ್ತಿದ್ದಾರೆ. ಜನರ ಬಳಿ ೫ವರ್ಷಕೊಮ್ಮೆ ಬಂದು ಹೋಗುವ ಮುಖಗಳಿಗೆ ಯಾವುದೇ ಕಾರಣಕ್ಕೂ ಮಣೆ ಹಾಕಬೇಡಿ. ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಸ್ಪಂಧಿಸುವ ವ್ಯಕ್ತಿಗಳಿಗೆ ಆಶೀರ್ವಾದ ಮಾಡಿ. ನಿಮ್ಮ ಸೇವೆಗೆ ನಾನು ಸದಾ ಸಿದ್ದನಿದ್ದೇನೆ. ಮೇ-೧೦ ರಂದು ನಡೆಯುವ ಚುನಾವಣೆಯಲ್ಲಿ ಶೇಜ ನಂ ೫ರ ಮುಂದೆಯಿರುವ ಕಮಲ ಗುರ್ತಿಗೆ ಬಟನ್ ಒತ್ತುವ ಮೂಲಕ ನಿಮ್ಮ ಮನೆಯ ಮಗನ ದಾಖಲೆಯ ವಿಜಯಕ್ಕೆ ಮುನ್ನುಡಿ ಬರೆಯುವಂತೆ ಮನವಿ ಮಾಡಿಕೊಂಡರು.
ವಿಠ್ಠಲ ಕುರಗುಂದ, ಪ್ರಮುಖರಾದ ಆರ್.ವಾಯ್.ಸಣ್ಣಕ್ಕಿ, ಎಮ್.ಆರ್.ಭೋವಿ, ಬಿ.ಎ.ಲೋಕನ್ನವರ, ಪರಮೇಶ್ವರ ಹೊಸಮನಿ, ರವೀಂದ್ರ ಪರುಶೆಟ್ಟಿ, ನೀಲಪ್ಪ ಕೇವಟಿ, ಎಸ್. ಆರ್. ಭೋವಿ, ಅಡಿವೆಪ್ಪ ದಳವಾಯಿ, ಸಿದ್ದಪ್ಪ ಹಳ್ಳೂರ, ಅಶೋಕ ಉದ್ದಪ್ಪನವರ, ಎಮ್.ಎನ್.ಶಿವನಮಾರಿ, ರಾಯಪ್ಪ ಬಳೋಲದಾರ, ಗಂಗಾಧರ ಲೋಕನ್ನವರ, ಸುಭಾಶ ಕೌಜಲಗಿ, ಹಾಸೀಮ್ ನಗಾರ್ಚಿ, ಶಾಂತಪ್ಪ ಹಿರೇಮೇತ್ರಿ, ಮಹಾದೇವ ಬುದ್ನಿ, ಮೆಹಬೂಬಸಾಬ ಮುಲ್ತಾನಿ, ಅಶೋಕ ಹೊಸಮನಿ, ಝಾಕೀರ ಜಮಾದಾರ, ಅಲ್ಲಾಭಕ್ಷ ಹೂನ್ನೂರ, ಬಸು ಜೋಗಿ, ವಿವಿಧ ಸಮಾಜಗಳ ಪ್ರಮುಖರು, ಬಿಜೆಪಿ ಪದಾಧಿಕಾರಿಗಳು, ಗ್ರಾ.ಪಂ ಸದಸ್ಯರು ಉಪಸ್ಥಿತರಿದ್ದರು.

https://pragati.taskdun.com/basanagowda-patil-yatnalbelagavid-k-shivakumarlakshmana-savadi/


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button