Cancer Hospital 2
Beereshwara 36
LaxmiTai 5

ಅಪಘಾತ ಸಂದರ್ಭದಲ್ಲಿ ಗೋಲ್ಡನ್ ಅವರ್ ಮಿಸ್ ಮಾಡಬೇಡಿ – ನಿತಿನ್ ಗಂಗಾನೆ

Anvekar 3
GIT add 2024-1

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಪಘಾತ ಹಾಗೂ ತುರ್ತು ವೈದ್ಯಕೀಯ ಪರಿಸ್ಥಿಯಲ್ಲಿ  ಅವಶ್ಯವಿರುವ ಚಿಕಿತ್ಸೆಯನ್ನು  ನೀಡುತ್ತ  ತಡಮಾಡದೇ ಸಕಲ  ವ್ಯವಸ್ಥೆಯಿರುವ ಆಸ್ಪತ್ರೆಗೆ ಸಾಗಿಸಬೇಕು. ಸಾಗಿಸುವ ಮಧ್ಯದಲ್ಲಿರುವ ಸುವರ್ಣ  ಘಳಿಗೆ(ಗೋಲ್ಟನ್ ಅವರ)ಯು  ಅತ್ಯಂತ ಮಹತ್ವವಾದ್ದು. ಆದ್ದರಿಂದ ಈ  ಅವಧಿಯನ್ನು  ಸರಿಯಾದ ರೀತಿಯಲ್ಲಿ ಉಪಯೋಗಿಸಿ  ರೋಗಿಯ ಪ್ರಾಣ ಉಳಿಸಲು  ಸಹಕರಿಸಬೇಕೆಂದು  ಕೆಎಲ್ಇ ಅಕಾಡೆಮಿ ಆಫ್ ಹೈಯರ ಎಜ್ಯುಕೇಶನ ಆಂಡ ರಿಸರ್ಚ (ಕಾಹೆರ)ನ ಉಪಕುಲಪತಿ ಡಾ. ನಿತಿನ ಗಂಗಾನೆ ಹೇಳಿದರು.

ಜೆಎನ್ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ  ಹಾಗೂ ವೈದ್ಯಕೀಯ  ಸಂಶೋಧನಾ  ಕೇಂದ್ರದ ಎಮರ್ಜೆನ್ಸಿ ಮೆಡಿಸಿನ್ ವಿಭಾಗವು ಇತ್ತೀಚೆಗೆ ಏರ್ಪಡಿಸಿದ್ದ ವಿಶ್ವ ಎಮರ್ಜೆನ್ಸಿ ಮೆಡಿಸಿನ್ ದಿನಾಚರಣೆಯಲ್ಲಿ ಮಾತನಾಡಿದ ಅವರು, ಹೃದಯಾಘಾತ, ಸುಟ್ಟಗಾಯ, ಪ್ರಕೃತಿ ವಿಕೋಪ, ಅಪಘಾತದಂತ ಸಂದರ್ಭಗಳಲ್ಲಿ ಸುವರ್ಣಗಳಿಗೆಯು ಅತ್ಯಂತ ಮಹತ್ವದ್ದಾಗಿದೆ. ಅಪಘಾತ ನಡೆದಾಗ ೆಷ್ಟು ಶೀಘ್ರವಾಗಿ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತದೆಯೇ ಅಷ್ಟು ಒಳ್ಳೆಯ ಚಿಕಿತ್ಸೆ ನೀಡಿ ರೋಗಿಯನ್ನು ಪ್ರಾಣಾಪಾಯದಿಂದ ಪಾರು ಮಾಡಬಹುದು. ಆದ್ದರಿಂದ ಸಾರ್ವಜನಿಕರು ರೋಗಿಗೆ ಸಮೀಪದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಶೀಘ್ರವೇ ಸಕಲ ಸೇವೆಗಳಿರುವ ಆಸ್ಪತ್ರೆಗೆ ದಾಖಲಿಸಲು ಮುಂದಾಗಬೇಕೆಂದು ಅವರು ಕರೆ ನೀಡಿದರು.

Emergency Service

ಜೆಎನ್ ಎಂಸಿ ಪ್ರಾಚಾರ್ಯರಾದ ಡಾ. ಎನ್ ಎಸ್ ಮಹಾಂತ ಶೆಟ್ಟಿ ಮಾತನಾಡಿದರು. ತುರ್ತು ಮೆಡಿಸಿನ್ ಸೇವಾ ವಿಭಾಗದ ಪ್ರೊಫೆಸರ ಡಾ. ಆರ್ ರಾಜೇಶ ಅವರು ಮಾತನಾಡಿ, ಸಕಲ ವ್ಯವಸ್ಥೆಗಳಿರುವ  ಆಸ್ಪತ್ರೆಗೆ ರೋಗಿಯನ್ನು ಕರೆತಂದರೆ  ಆತನನ್ನು ಪ್ರಾಣಾಪಾಯದಿಂದ  ಪಾರು ಮಾಡಬಹುದು. ಆದ್ದರಿಂದ ಸ್ಥಳೀಯ ಆಸ್ಪತ್ರೆಗಳಲ್ಲಿ ಸಮಯವನ್ನು ಹಾಳು ಮಾಡದೇ ತೆಗೆದುಕೊಂಡು ಬರಬೇಕು ಎಂದರು.

ಸಮಾರಂಭದಲ್ಲಿ ಡಾ. ವಿ ಡಿ ಪಾಟೀಲ, ಕಾಹೆರ ಕುಲಸಚಿವ  ಡಾ. ಎಂ ಎಸ್ ಗಣಾಚಾರಿ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. (ಕರ್ನಲ್) ಎಂ ದಯಾನಂದ, ಕೆಎಲ್ಇ ಕ್ಯಾನ್ಸರ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ.ಜಾಲಿ, ಡಾ. ಆರ್ ಬಿ ನೇರ್ಲಿ, ಡಾ. ವಿ ಎಂ ಪಟ್ಟಣಶೆಟ್ಟಿ, ಡಾ. ಆರಿಫ್ ಮಾಲ್ದಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಡಾ. ಸಿ ಎಸ್ ಸಾಣಿಕೊಪ್ಪ ಸ್ವಾಗತಿಸಿದರು. ಡಾ. ಶ್ರಿನಿವಾಸ ಕುಲಕರ್ಣಿ ವಂದಿಸಿದರು. ಡಾ. ಲಕ್ಷ್ಮಿ ಎಂ ಪ್ರಾಸ್ತಾವಿಕವಾಗಿ ಮಾತನಾಡಿದರು.

Bottom Add3
Bottom Ad 2