ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:
ರಾಜ್ಯದಲ್ಲಿ ವಾಹನ ಸವಾರರಿಗೆ ವಿಧಿಸುವ ದಂಡದ ಪ್ರಮಾಣ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ನಿನ್ನೆಯಿಂದಲೇ ಜಾರಿಗೆ ಬಂದಿದೆ.
ಮಿತಿಮೀರಿದ ವೇಗಕ್ಕೆ 1000 ರೂ, ವಾಹನ ಚಲಾಯಿಸುವಾಗ ಮೊಬೈಲ್ ಬಳಸಿದರೆ ಮೊದಲ ಬಾರಿ 1000 ರೂ., ನಂತರ 2000 ರೂ., ಇನ್ಸೂರೆನ್ಸ್ ಇಲ್ಲದಿದ್ದರೆ 1000 ರೂ., ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲದಿದ್ದರೆ ಮೊದಲ ಬಾರಿ 2000 ರೂ., ನಂತರ 5000 ರೂ., ನೊಂದಣಿ ರಹಿತ ವಾಹನಕ್ಕೆ ಮೊದಲ ಬಾರಿಗೆ 5 ಸಾವಿರ ರೂ., ನಂತರ 10 ಸಾವಿರ ರೂ., ಅಸುರಿಕ್ಷಿತ ಚಾಲನೆ, ನೋ ಪಾರ್ಕಿಂಗ್ ಪ್ರದೇಶದಲ್ಲಿ ಪಾರ್ಕ್ ಮಾಡಿದರೆ 1000 ದಂಡ ನಿಗದಿ ಮಾಡಲಾಗಿದೆ.
ಬಸ್ ನಿರ್ವಾಹಕರಿಗೂ ಟಿಕೆಟ್ ಕೊಡದಿದ್ದರೆ, ಟಿಕೆಟ್ ದರ ವ್ಯತ್ಯಾಸ ಮಾಡಿದರೆ, ಅಮಾನ್ಯ ಟಿಕೆಟ್ ನೀಡಿದರೆ 500 ರೂ. ದಂಡ ವಿಧಿಸಲಾಗುತ್ತದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ