Kannada NewsKarnataka News

​ಲಕ್ಷ್ಮೀ ಹೆಬ್ಬಾಳಕರ್ ಪರ ಕಂಗ್ರಾಳಿ ಭಾಗದಲ್ಲಿ ಕಾರ್ಯಕರ್ತರಿಂದ ಮನೆ ಮನೆ ಪ್ರಚಾರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ​ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಪರ ಕ್ಷೇತ್ರಾದ್ಯಂತ ಕಾರ್ಯಕರ್ತರು ಮನೆ ಮನೆ ಪ್ರಚಾರ ನಡೆಸುತ್ತಿದ್ದಾರೆ.

ಕಂಗ್ರಾಳಿ ಬಿಕೆ ಗ್ರಾಮದ ಪಾರ್ವತಿ ನಗರ, ಮರಾಠಾ ಗಲ್ಲಿ ಮೊದಲಾದ ಭಾಗದಲ್ಲಿ ಕಾರ್ಯಕರ್ತರು ಸೋಮವಾರ ಪ್ರಚಾರ ನಡೆಸಿದರು.  ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಕಳೆದ 5 ವರ್ಷದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ವಿವರಿಸುತ್ತ ಪಕ್ಷಾತೀತವಾಗಿ ಕಾರ್ಯಕರ್ತರು, ಸಾರ್ವಜನಿಕರು ಪ್ರಚಾರದಲ್ಲಿ ತೊಡಗಿದ್ದಾರೆ.

ಲಕ್ಷ್ಮೀ ಹೆಬ್ಬಾಳಕರ್ ಅವರಂತಹ ಕೆಲಸ ಮಾಡುವ ಶಾಸಕರು ನಮ್ಮ ಕ್ಷೇತ್ರಕ್ಕೆ ಸಿಕ್ಕಿದ್ದಾರೆ. ಅವರಿಂದಾಗಿ ಕ್ಷೇತ್ರ ಇತಿಹಾಸದಲ್ಲೇ ಮೊದಲ ಬಾರಿಗೆ ಕ್ಷೇತ್ರ ಅಭಿವೃದ್ಧಿಯತ್ತ ಸಾಗುತ್ತಿದೆ. ಇವರನ್ನು ಮತ್ತೊಮ್ಮೆ ಗೆಲ್ಲಿಸು ಮೂಲಕ ಅವರು ಮಾಡಿರುವ ಸಾಧನೆಗೆ ನಮ್ಮ ಕೊಡುಗೆ ನೀಡೋಣ. ಅತ್ಯಂತ ಹೆಚ್ಚಿನ ಬಹುಮತದಿಂದ ಅವರನ್ನು ಆಯ್ಕೆ ಮಾಡಿ ಕಳಿಸೋಣ ಎಂದು ಕಾರ್ಯಕರ್ತರು ವಿನಂತಿಸಿದರು.

Home add -Advt

ಮಹಿಳೆಯರು, ಯುವಕರು, ವೃದ್ದರು ಸಹ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಪಕ್ಷಾತೀತವಾಗಿ ಆರಿಸಿ ಕಳಿಸೋಣ ಎಂದು ಸ್ವಯಂ ಪ್ರೇರಿತರಾಗಿ ಪ್ರಚಾರ ಮಾಡುತ್ತಿರುವ ದೃಷ್ಯ ಕಂಡು ಬಂತು.

https://pragati.taskdun.com/huge-public-support-for-lakshmi-hebbalkar-in-sambra-hindalaga-lakshmi-akka-is-sure-to-win/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button