Latest

ಜ್ಯೋತಿಷಿ ಮಾತು ಕೇಳಿ ಅಪ್ಪ-ಅಮ್ಮನನ್ನೇ ಕೊಂದ ಮಗ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಜ್ಯೋತಿಷಿ ಮಾತು ನಂಬಿ ಮಗನೊಬ್ಬ ತನ್ನ ತಂದೆ-ತಾಯಿಯನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಪೀಣ್ಯದಲ್ಲಿ ನಡೆದಿದೆ.

ಪಿತೃದೋಷವಿದೆ ತಂದೆ ತಾಯಿ ಇರುವವರೆಗೂ ನೀನು ಚೆನ್ನಾಗಿ ಇರಲು ಸಾಧ್ಯವಿಲ್ಲ ಎಂದು 14 ವರ್ಷದ ಬಾಲಕನಿಗೆ ಜೋತಿಷಿಯೊಬ್ಬ ಶಾಸ್ತ್ರ ನುಡಿದಿದ್ದ. ಜ್ಯೋತಿಷಿ ಮಾತು ನಂಬಿದ ಯುವಕ ತಂದೆ-ತಾಯಿ ಮೇಲೆ ಕಲ್ಲು ಎತ್ತಿಹಾಕಿ ಭೀಕರವಾಗಿ ಕೊಲೆ ಮಾಡಿದ್ದ. ಇದೀಗ ಆರೋಪಿ ಬಂಧನದಿಂದಾಗಿ ಈ ಸತ್ಯ ಬಯಲಾಗಿದೆ.

ಪೀಣ್ಯದ ಕರಿಹೋಬನಹಳ್ಳಿಯ ಕೆಎಎಸ್ ಅಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸೆಕ್ಯುರಿಟಿ ಹಾಗೂ ಆತನ ಪತ್ನಿಯ ಹತ್ಯೆ ಪ್ರಕರಣ ಬೇಧಿಸಿದ ಪೊಲೀಸರಿಗೆ ಜೋತಿಷಿ ಮಾತು ಕೇಳಿ ಮಗನೇ ದಂಪತಿಯ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಇದೀಗ ಆರೋಪಿ ಯುವಕ ಹಾಗೂ ಜ್ಯೋತಿಷಿಯನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ.

ಐಎನ್ ಎಸ್ ವಿಕ್ರಮಾದಿತ್ಯದಲ್ಲಿ ಬೆಂಕಿ ಅವಘಡ

Home add -Advt

Related Articles

Back to top button