Latest

ಶಾಸಕರಾಗಬೇಕೆ? ಅರ್ಜಿ ಸಲ್ಲಿಸಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ವಿಧಾನ ಪರಿಷತ್ ಸದಸ್ಯರಾಗಬಯಸಿದ್ದೀರಾ? ಕೂಡಲೇ ಅರ್ಜಿ ಸಲ್ಲಿಸಿ.

2022ರ ಜೂನ್ ತಿಂಗಳಿನಲ್ಲಿ ನಡೆಯಲಿರುವ ವಿಧಾನಪರಿಷತ್ತಿನ ವಾಯವ್ಯ ಪದವೀಧರ ಕ್ಷೇತ್ರ ಮತ್ತು ವಾಯವ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಆಕಾಂಕ್ಷಿಗಳಿಂದ ಕಾಂಗ್ರೆಸ್ ಅರ್ಜಿ ಆಹ್ವಾನಿಸಿದೆ.

Home add -Advt

ವಾಯವ್ಯ ಕ್ಷೇತ್ರ ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದ್ದು,  ಆಕಾಂಕ್ಷಿಗಳು ತಮ್ಮ ಪರಿಚಯ ಪತ್ರ, ಫೋಟೋ ಸಹಿತ ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ ಅವರ ಕಚೇರಿಗೆ ಸಲ್ಲಿಸಲು ಕೋರಲಾಗಿದೆ.

ಜುಲೈ 2022ರಲ್ಲಿ ಈ ಎರಡು ಸ್ಥಾನಗಳಿಗೆ ಹಾಲಿ ಇರುವ ಸದಸ್ಯರು ನಿವೃತ್ತರಾಗಲಿದ್ದಾರೆ. 2022ರ ಜೂನ್ ತಿಂಗಳಲ್ಲಿ ಚುನಾವಣೆ ನಡೆಯಲಿದೆ.

ಆಸಕ್ತರು ಇದೇ ಮೇ 12ರೊಳಗೆ ಅರ್ಜಿ ಸಲ್ಲಿಸುವಂತೆ ವಿನಯ ನಾವಲಗಟ್ಟಿ ಕೋರಿದ್ದಾರೆ.

Related Articles

Back to top button