Belagavi NewsBelgaum NewsKannada NewsKarnataka News
ವಿದ್ಯಾರ್ಥಿ ನಾಪತ್ತೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಗ್ರಾಮದ ಸಂತೋ? ತಮ್ಮಾಣ್ಣಿ ಗೊಳಸಂಗಿ ೯ ತರಗತಿಯ ವಿದ್ಯಾರ್ಥಿಯು (ಬಾಲಕ) ಏ.೧೩ ರಂದು ಉಣ್ಣಿಬಸವನ ದೇವಸ್ಥಾನದ ಹತ್ತಿರದ, ಹಾರೂಗೇರಿ ಧಾರವಾಡ ಪಾಠ ಶಾಲೆಯ ಬೇಸಿಗೆ ಶಿಬಿರದಿಂದ ಯಾರಿಗೂ ಹೇಳದೇ ಕೇಳದೇ ಎಲ್ಲಿಯೊ ಹೋಗಿ ಕಾಣೆಯಾಗಿರುತ್ತಾನೆ ಎಂದು ಕಾಣೆಯಾದ ವಿದ್ಯಾರ್ಥಿ ತಂದೆ ತಮ್ಮಾಣ್ಣಿ ಗೊಳಸಂಗಿ ಅವರು ಹಾರೂಗೇರಿ ಪೊಲೀಸ್ ಠಾಣೆಗೆ ದೂರ ದಾಖಲಿಸಿದ್ದಾರೆ.
ಕಾಣೆಯಾದ ವಿದ್ಯಾರ್ಥಿ ಚಹರೆ: ವಯಸ್ಸು ೧೬ ಇದ್ದು, ೫ ಪೂಟ ೪ ಇಂಚು ಎತ್ತರ, ಗೋದಿ ಮೈ ಬಣ್ಣ, ಕೋಲು ಮುಖ, ಉದ್ದ ಮೂಗು, ಶಾಲೆಯಿಂದ ಹೋಗುವಾಗ ಗುಲಾಬಿ ಬಣ್ಣದ ಟಿ-ಶರ್ಟ್ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ.
ಸದರಿ ಕಾಣೆಯಾದ ವಿದ್ಯಾರ್ಥಿ ಮಾಹಿತಿ ದೊರಕಿದಲ್ಲಿ ದೂ.೯೦೦೮೦೬೦೨೮೯ ಸಂಖ್ಯೆಗೆ ಸಂಪರ್ಕಿಸಬೇಕು ಎಂದು ಹಾರೂಗೇರಿ ಪೊಲೀಸ್ ಠಾಣೆ ಪಿ.ಎಸ್.ಐ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




