ಕುಟುಂಬದ ಎಲ್ಲರ ಮೇಲೂ ವರದಕ್ಷಿಣಿ ಕಿರುಕುಳ ಆರೋಪ ಸಾಧ್ಯವಿಲ್ಲ ಎಂದು ಮಾವನನ್ನು ಆರೋಪ ಮುಕ್ತಗೊಳಿಸಿದ ನ್ಯಾಯಾಲಯ

ಪ್ರಗತಿ ವಾಹಿನಿ ಸುದ್ದಿ, ನವದೆಹಲಿ –
ವರದಕ್ಷಿಣಿ ಕಿರುಕುಳವನ್ನು ಕುಟುಂಬದ ಎಲ್ಲ ಸದಸ್ಯರ ಮೇಲೂ ಹೊರಿಸಲು ಸಾಧ್ಯವಿಲ್ಲ ಎಂದು ದೆಹಲಿಯ ತೀಸ್ ಹಜಾರಿಯ ಹೆಚ್ಚುವರಿ ಸೆಶೆನ್ಸ್ ನ್ಯಾಯಾಲಯವು ಪ್ರಕರಣವೊಂದರಲ್ಲಿ ತೀರ್ಪು ನೀಡಿದೆ.
ಚಾಂದನಿ ಚೌಕ್ ನಿವಾಸಿ ಮಹಿಳೆಯೊಬ್ಬರು ಪತಿ, ಅತ್ತೆ ಹಾಗೂ ಮಾವನ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದರು. ಕಳೆದ ನಾಲ್ಕು ವರ್ಷಗಳಿಂದ ಪ್ರಕರಣದ ವಿಚಾರಣೆ ನಡೆದಿತ್ತು. ಆದರೆ ಮಾವನ ವಿರುದ್ಧ ದಾಖಲಿಸಲಾದ ದೂರಿನಲ್ಲಿ ಸಾಕ್ಷ್ಯಾಧಾರಗಳ ಕೊರತೆಯನ್ನು ಎತ್ತಿ ಹಿಡಿದ ನ್ಯಾಯಾಲಯವು ಮಾವನನ್ನು ಆರೋಪ ಮುಕ್ತಗೊಳಿಸಿದೆ.
ಪ್ರತಿಯೊಂದು ಸಣ್ಣ ಭಿನ್ನಾಭಿಪ್ರಾಯಕ್ಕೂ ಚಿತ್ರಹಿಂಸೆಯನ್ನು ಅನ್ವಯಿಸಲಾಗುವುದಿಲ್ಲ ಎಂದು ಪ್ರಕರಣದ ವಿಚಾರಣೆ ನಡೆಸಿದ್ದ ತಿಸ್ ಹಜಾರಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಂಜೀವ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಮನೆಯಲ್ಲಿ ಕಿರುಕುಳದಿಂದ ರಕ್ಷಿಸಲು ವರದಕ್ಷಿಣೆ ಕಿರುಕುಳ ಕಾನೂನನ್ನು ಜಾರಿಗೆ ತರಲಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ನಿಯಮದ ದುರುಪಯೋಗವೂ ಆಗುತ್ತಿದೆ. ಕುಟುಂಬದ ಪ್ರತಿಯೊಬ್ಬ ಸದಸ್ಯರು, ಇತರ ಸಂಬಂಧಿಕರು ಸಹ ಸಣ್ಣ ವಿವಾದಗಳಲ್ಲಿ ವರದಕ್ಷಿಣೆ ಕಿರುಕುಳದ ನಕಲಿ ಆರೋಪಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ ಎಂದು ನ್ಯಾಯಾಲಯ ಹೇಳಿದೆ.
ಕುಟುಂಬದ ಸದಸ್ಯರ ವಿರುದ್ಧ ವರದಕ್ಷಿಣೆ ಕಿರುಕುಳ ದಾಖಲಿಸಿದರೆ ಸೂಕ್ತ ಸಾಕ್ಷ್ಯಾಧಾರವನ್ನೂ ಒದಗಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಸಿದ್ದರಾಮಯ್ಯ ಜತೆ ಮಾತುಕತೆ: ಬೆಳಗಾವಿಯಲ್ಲಿ ಬಹಿರಂಗಪಡಿಸಿದ ಯಡಿಯೂರಪ್ಪ