ಪ್ರಗತಿವಾಹಿನಿ ಸುದ್ದಿ, ಕಕ್ಕೇರಿ: ಲೋಕೊಳಿ-ಲಕ್ಕೆಬೈಲ್ ಮಧ್ಯದ ೧.೭೫ ಕಿ.ಮೀ. ರಸ್ತೆ ಅಭಿವೃದ್ಧಿಗೆ ೯.೩೬ ಲಕ್ಷ ರೂ.ಗಳ ಅನುದಾನ ಮಂಜೂರಾಗಿದ್ದು ಪೂಜೆ ನೆರವೇರಿಸಿದ್ದು, ಕೆಲದಿನಗಳಲ್ಲಿ ಕಾಮಗಾರಿ ಪ್ರಾರಂಭಿಸುವುದು ಶಾಸಕಿಯಾದ ನನ್ನ ಕರ್ತವ್ಯ ಎಂದು ಶಾಸಕಿ ಅಂಜಲಿ ನಿಂಬಾಳಕರ್ ಹೇಳಿದರು.
ಖಾನಾಪುರ ತಾಲೂಕಿನ ಲೋಕೊಳಿ ಗ್ರಾಮದಲ್ಲಿ ಶ್ರೀ ಜಯ ಹನುಮಾನ ಕಾರ್ತಿಕ್ ಉತ್ಸವ ( ಹನುಮಾನ ಪರ್ವ ) ಕಾರ್ಯಕ್ರಮದಲ್ಲಿ ಭಾಗಿಯಾಗಿ, ಮಹಾಪ್ರಸಾದಕ್ಕೆ ೧೧ ಸಾವಿರ ರೂ.ಗಳ ದೇಣಿಗೆ ನೀಡಿ, ನೆರೆದ ಭಕ್ತ ಸಮೂಹವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಖಾನಾಪುರ ಪಟ್ಟಣದಿಂದ ಪಾರಿಶ್ವಾಡ ಗ್ರಾಮದ ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ೨೦ ಕೋಟಿ ರೂ.ಗಳ ಅನುದಾನ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ ಕೂಡ ಮುಗಿದಿದೆ. ಶೀಘ್ರ ಕಾರ್ಯ ಆರಂಭಗೊಳ್ಳುವುದು . ಅದರಂತೆ ಲೋಕೊಳಿ ಗ್ರಾಮದ ರಸ್ತೆ ಕೂಡ ಅಭಿವೃದ್ಧಿ ಹೊಂದಲಿದೆ ಎಂದು ಭರವಸೆ ನೀಡಿದರು.
ಖಾನಾಪುರ ತಾಲೂಕಿನ ಪ್ರತಿ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿ ಮಾಡುವುದು ನನ್ನ ಧ್ಯೆಯ. ಪಾಮಾಣಿಕ ಪ್ರಯತ್ನ ಮಾಡುವ ಉದ್ದೇಶದಿಂದ ಕಾರ್ಯೋನ್ಮುಖಳಾಗಿದ್ದೇನೆ. ಲೋಕೊಳಿ ಕಾರ್ಯಕ್ರಮದ ನಿರೂಪ ತಿಳಿದುಕೊಂಡು ಬಂದು ಈ ಪವಿತ್ರ ದೈವಿಕ ಉತ್ಸವದಲ್ಲಿ ಭಾಗಿ ಆಗಿರುವುದಕ್ಕೆ ನನಗೆ ಧನ್ಯತೆಯ ಅನುಭವವಾಗುತ್ತಿದೆ. ಈ ಹನುಮಾನ್ ಕಾರ್ತಿಕ ಉತ್ಸವ ೧೫ ವರ್ಷಗಳಿಂದ ನಡೆದುಕೊಂಡು ಬರುತ್ತಿರುವುದು ಜನತೆಯ ದೈವ ಭಕ್ತಿ ಎದ್ದು ಕಾಣುತ್ತದೆ ಎಂದು ಅಂಜಲಿ ಹೇಳಿದರು.
ಈ ಸಂದರ್ಭದಲ್ಲಿ ಲೋಕೊಳಿ ಹಾಗೂ ಸುತ್ತಲಿನ ಗ್ರಾಮಗಳ ಉಪಸ್ಥಿತಿಯಲ್ಲಿ ಹನುಮಾನ ಕಾರ್ತಿಕ ಉತ್ಸವ ಸಡಗರ ಸಂಭ್ರಮದಿಂದ ಜರುಗಿತು. ಸುಮಾರು ೧೦ ಸಾವಿರಕ್ಕೂ ಹೆಚ್ಚು ಭಕ್ತರು ಸೇರಿದ್ದರು.
ಮರಾಠಿ ಭಕ್ತಿ ಸಂಗೀತ ಹಾಗೂ ವಿವಿಧ ವಾದ್ಯ ಮೇಳದೊಂದಿಗಿನ ಭಜನಾ ಮಂಡಳಿಗಳ ಹಾಡು ಹಬ್ಬ ಭಕ್ತಿಭಾವ ಇಮ್ಮಡಿಗೊಳಿಸಿ ಗ್ರಾಮದಲ್ಲಿ ಹಬ್ಬದ ವಾತಾವರಣ ಎಲ್ಲೆಡೆ ಪಸರಿಸಿ, ಕಣ್ಮನ ಸಂತಸಗೊಳಿಸಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ