Latest

ಇಲ್ಲಿ ನೀವು ಹೀಗೆ ಕೂಗಿದ್ರೆ ಅಲ್ಲಿ ನನಗೆ ಹೊಡೆತ ಬೀಳುತ್ತೆ ಎಂದ ಮಾಜಿ ಡಿಸಿಎಂ

ಪ್ರಗತಿವಾಹಿನಿ ಸುದ್ದಿ; ತುಮಕೂರು: ನಾನು ಸಿಎಂ ಆಗಬೇಕು ಎಂದು ಯಾರೂ ಕೂಗಬೇಡಿ. ಇದರಿಂದ ಒಳಸಂಚು ಶುರುವಾಗುತ್ತೆ ಎಂದು ಮಾಜಿ ಡಿಸಿಎಂ, ಕಾಂಗ್ರೆಸ್ ನಾಯಕ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಚಿಕ್ಕಗುಂಡಗಲ್ ಗೆ ಭೇಟಿ ನೀಡಿದ್ದ ಪರಮೇಶ್ವರ್ ಅವರಿಗೆ ಅವರ ಬೆಂಬಲಿಗರು ಸಿಎಂ ಆಗಬೇಕು ಎಂದು ಘೋಷಣೆ ಕೂಗಿದ್ದಾರೆ. ಈ ವೇಳೆ ಮಾತನಾಡಿದ ಪರಮೇಶ್ವರ್, ನೀವು ಇಲ್ಲಿ ಸಿಎಂ ಎಂದು ಘೋಷಣೆ ಶುರು ಮಾಡಿದರೆ ಅಲ್ಲಿ ನನಗೆ ಹೊಡೆತ ಬೀಳುತ್ತೆ. ನೀವು ಸಿಎಂ ವಿಚಾರ ಎತ್ತಿದರೆ ಬಹಳ ಕಷ್ಟವಾಗುತ್ತೆ. ಹಾಗಾಗಿ ಯಾರೂ ಕೂಡ ಘೋಷಣೆ ಕೂಗಬೇಡಿ ಎಂದು ಮನವಿ ಮಾಡಿದ್ದಾರೆ.

ನಿಮ್ಮ ಆಶಿರ್ವಾದ, ಪರಮಾತ್ಮನ ಇಚ್ಛೆ ಇದ್ದರೆ ಸಿಎಂ ಆಗುತ್ತೇನೆ ಎಂದಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button