Latest

ನನ್ನ ಪತಿ ನನ್ನ ಹತ್ಯೆಗೆ ಯತ್ನಿಸಿದ್ದಾರೆ; ಕಾಂಗ್ರೆಸ್ ಮುಖಂಡ ಸೇರಿ 6 ಜನರ ವಿರುದ್ಧ FIR ದಾಖಲು

ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ಕ್ಯಾಸಿನೋ ವಿಚಾರವಾಗಿ ಹುಬ್ಬಳ್ಳಿಯಲ್ಲಿ ನಡೆಯುತ್ತಿದ್ದ ಗಲಾಟೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಇದೀಗ ಪತ್ನಿಗೆ ಜೀವ ಬೆದರಿಕೆಯೊಡ್ಡಿದ ಪ್ರಕರಣ ಸಂಬಂಧ ಕಾಂಗ್ರೆಸ್ ಮುಖಂಡ ಗಿರೀಶ್ ಗದಿಗೆಪ್ಪಗೌಡರ್ ಸೇರಿದಂತೆ 6 ಜನರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ಗಿರೀಶ್ ವಿರುದ್ಧ ಅವರ ಪತ್ನಿ ಗಂಭೀರ ಆರೋಪ ಮಾಡಿದ್ದು, ತನ್ನ ಪತಿ ಹಾಗೂ ಕುಟುಂಬಸ್ಥರು ತನ್ನ ಹತ್ಯೆಗೆ ಯತ್ನಿಸಿದ್ದಾರೆ.  ಗಂಡನ ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ನನ್ನ ಹತ್ಯೆಗೆ ಸಂಚು ರೂಪಿಸಿದ್ದಾರೆ. ಗಿರೀಶ್ ಗದಿಗೆಪ್ಪಗೌಡರ್ ಗೆ ಕ್ಯಾಸಿನೋ ವ್ಯವಹಾರ, ಡ್ರಗ್ಸ್ ಪೆಡ್ಲರ್ ಗಳ ನಂಟಿದೆ ಎಂದು ದೂರು ನೀಡಿದ್ದರು. ಅಲ್ಲದೇ ತನ್ನನ್ನು ಕೊಲೆ ಮಾಡಲು ಯತ್ನ ನಡೆಸಿದ್ದ ಬಗ್ಗೆ ವಿಡಿಯೋವನ್ನು ಕೂಡ ಬಿಡುಗಡೆ ಮಾಡಿದ್ದರು.

Home add -Advt

ಹಣಕಾಸಿನ ವಿಚಾರಕ್ಕೆ ತನ್ನನ್ನು ಎಳೆದು ತಂದಿದ್ದು, ಇದೀಗ ತಾನು ತನ್ನ ತಾಯಿ ಮನೆಯಲ್ಲಿದ್ದು, ತನಗೆ ರಕ್ಷಣೆ ನೀಡಬೇಕು ಎಂದು ಪೊಲೀಸರಿಗೆ ಮನವಿ ಮಾಡಿದ್ದರು. ಅಲ್ಲದೇ ಪತಿ ವಿರುದ್ಧ ದೂರು ನೀಡಿದ್ದರು.

ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಾಂಗ್ರೆಸ್ ಮುಖಂಡ ಸೇರಿದಂತೆ 6 ಜನರ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ.
ವಿಜಯಪುರದಲ್ಲಿ ಅಗ್ನಿ ದುರಂತ; ಇಬ್ಬರು ಸಜೀವದಹನ

Related Articles

Back to top button