
ಪ್ರಗತಿವಾಹಿನಿ ಸುದ್ದಿ; ಚಿಕ್ಕಬಳ್ಳಾಪುರ: ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಚಿವ ಡಾ.ಕೆ.ಸುಧಾಕರ್ ಹೀನಾಯವಾಗಿ ಸೋಲನುಭವಿಸಿದ್ದು, ಅವರ ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಚಿತ್ತಾರ ವೆಂಕಟೇಶ್ ಆತ್ಮಹತ್ಯೆ ಮಾಡಿಕೊಂಡ ಸಚಿವರ ಅಂಧ ಅಭಿಮಾನಿ. ಸಚಿವ ಸುಧಾಕರ್ ಪರಾಭವಗೊಂಡಿದ್ದಕ್ಕೆ ಮನನೊಂದು ಚಿತ್ತಾರ ವೆಂಕಟೇಶ್ ಕೆರೆಗೆ ಹಾರಿ ಆತ್ಮಹಯೆ ಮಾಡಿಕೊಂಡಿದ್ದಾರೆ.
ವಡ್ರೆಪಾಳ್ಯದಲ್ಲಿ ಈ ಘಟನೆ ನಡೆದಿದೆ. ಕೋಟೆ ನಿವಾಸಿಯಾಗಿರುವ ವೆಂಕಟೇಶ್, ಸಚಿವ ಸುಧಾಕರ್ ಅವರ ಕಟ್ಟಾ ಅಭಿಮಾನಿಯಾಗಿದ್ದ ಎಂದು ತಿಳಿದುಬಂದಿದೆ.