Latest

ಡಿಸಿಎಂ ಸ್ಥಾನಕ್ಕೆ ತಂದೆ ಪರ ಮಗಳ ಲಾಬಿ

ಪ್ರಗತಿವಾಹಿನಿ ಸುದ್ದಿ, ವಿಜಯಪುರ: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ರಚನೆಯಲ್ಲಿ ಬ್ಯೂಸಿಯಾಗಿದೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ಮಧ್ಯೆ ಪೈಪೋಟಿ ಏರ್ಪಟ್ಟಿದ್ದು ಡಿಸಿಎಂ ಸ್ಥಾನದ ಆಕಾಂಕ್ಷಿಗಳ ಪಟ್ಟಿಯೂ ಬೆಳೆಯುತ್ತ ಸಾಗಿದೆ.

ಏತನ್ಮಧ್ಯೆ ಆರು ಬಾರಿ ಶಾಸಕರಾಗಿರುವ ಮಾಜಿ ಸಚಿವ ಶಿವಾನಂದ ಪಾಟೀಲ್ ಪರ ಅವರ ಪುತ್ರಿ ಸಂಯುಕ್ತಾ ಪಾಟೀಲ್ ಲಾಬಿ ನಡೆಸಿದ್ದು “ನನ್ನ ತಂದೆಗೂ ಡಿಸಿಎಂ ಸ್ಥಾನ ಸಿಗುವಂತಾಗಲಿ” ಎಂದು ಹೈಕಮಾಂಡ್ ಎದುರು ತಮ್ಮ ಡಿಮ್ಯಾಂಡ್ ಇಟ್ಟಿದ್ದಾರೆ.

Home add -Advt

ಪಂಚಮಸಾಲಿ ಸಮುದಾಯದ ಪ್ರಬಲ ನಾಯಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ಶಿವಾನಂದ ಪಾಟೀಲ್ ಈ ಹಿಂದೆ ತಿಕೋಟಾ ಕ್ಷೇತ್ರದಲ್ಲಿ ಒಮ್ಮೆ ಜೆಡಿಎಸ್ ನಿಂದ, ಇನ್ನೊಮ್ಮೆ ಬಿಜೆಪಿಯಿಂದ, ಹೀಗೆ ಎರಡು ಬಾರಿ ಸ್ಪರ್ಧಿಸಿ ಒಂದು ಬಾರಿ ಎಂ.ಬಿ.ಪಾಟೀಲ್ ಅವರನ್ನು ಸೋಲಿಸಿದ್ದರು.

2004ರಲ್ಲಿ ಬಸವನಬಾಗೇವಾಡಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು 2008ರಲ್ಲಿ ಎಸ್.ಕೆ.ಬೆಳ್ಳುಬ್ಬಿ ಅವರ ವಿರುದ್ಧ ಸೋಲು ಕಂಡಿದ್ದರೂ ನಂತರ ಸತತವಾಗಿ ಗೆಲುವು ಸಾಧಿಸುತ್ತ ಬಂದಿದ್ದಾರೆ.

https://pragati.taskdun.com/the-kerala-story-fame-actress-adah-sharma-met-with-a-road-accident/

https://pragati.taskdun.com/d-k-shivakumarswamijismeetd-k-suresh/
https://pragati.taskdun.com/dr-k-sudhakarfansuicidechikkaballapura/

Related Articles

Back to top button