Kannada News

ಲಂಡನ್‌ನ ರಾಯಲ್ ಸೊಸಾಯಿಟಿ ಆಫ್ ಮೆಡಿಸಿನ್ ಸಂಶೋಧನಾ ಸಭೆಯಲ್ಲಿ ಡಾ.ಪ್ರಭಾಕರ ಕೋರೆ ನೇತೃತ್ವದ ಕೆಎಲ್ಇ ತಂಡ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –

ಇತ್ತೀಚಿಗೆ ಲಂಡನ್‌ನ ರಾಯಲ್ ಸೊಸಾಯಿಟಿ ಆಫ್ ಮೆಡಿಸಿನ್, ಮಕ್ಕಳ ಹೂಡಿಗೆ ನಿಧಿ ಪ್ರತಿಷ್ಠಾನ (ಸಿಐಎಫ್‌ಎಫ್)ಆಯೋಜಿಸಿದ್ದ ಅಂತರಾಷ್ಟ್ರೀಯ ಸಂಶೋಧನಾ ಸಭೆಯಲ್ಲಿ ಕೆಎಲ್‌ಇ ಕಾರ್ಯಾಧ್ಯಕ್ಷರಾದ ಡಾ ಪ್ರಭಾಕರ ಕೋರೆ ಅವರು ಭಾಗವಹಿಸಿದ್ದರು.

ಗರ್ಭಾವಸ್ಥೆಯ ಮಹಿಳೆಯರಲ್ಲಿ ಕಬ್ಬಿಣಾಂಶದ ಕೊರತೆಯಿಂದ ಉಂಟಾಗುವ ರಕ್ತಹೀನತೆಯನ್ನು ಕಡಿಮೆ ಮಾಡುವ ವಿಚಾರವಾಗಿ ಜರುಗಿದ ಮಹತ್ವದ ಸಭೆಯಲ್ಲಿ ಲಂಡನ್‌ನಲ್ಲಿ ಪಾಲ್ಗೊಂಡು ಚರ್ಚಿಸಿದರು.

ಈ ಅಂತರಾಷ್ಟ್ರೀಯ ಸಭೆಯಲ್ಲಿ ಥಾಮಸ್ ಜೆಫರ್ಸನ್ ವಿಶ್ವವಿದ್ಯಾನಿಲಯ, ಮಿನ್ನೇಸೋಟ ವಿಶ್ವವಿದ್ಯಾನಿಲಯ, ಅಲಬಾಮಾ ವಿಶ್ವವಿದ್ಯಾನಿಲಯದ ಸಂಶೋಧಕರಾದ ಡಾ ರಿಚರ್ಡ್ ಡರ್ಮನ್, ಡಾ ಮೈಕೆಲ್ ಔರ್ಬ್ಯಾಕ್ ಮತ್ತು ಡಾ ಮೈಕೆಲ್ ಜಾರ್ಜಿಫ್ ಅವರು ಸಂಶೋಧನಾ ಸಭೆಯ ನೇತೃತ್ವವನ್ನು ವಹಿಸಿದ್ದರು.

ಬೆಳಗಾವಿಯ ಕೆಎಲ್‌ಇ ಜವಾಹರಲಾಲ ನೆಹರು ವೈದ್ಯಕೀಯ ಕಾಲೇಜಿನ ಸಂಶೋಧಕರಾದ ಡಾ.ಶಿವಪ್ರಸಾದ್ ಗೌಡರ್, ಡಾ.ಎಂ.ಬಿ.ಬೆಲ್ಲದ್, ರೂಪಾ ಬೆಲ್ಲದ್, ಡಾ.ಮಂಜುನಾಥ್ ಸೋಮಣ್ಣವರ್, ಡಾ.ಉಮೇಶ್ ಚರಂತಿಮಠ, ಡಾ.ಯೋಗೀಶ್ ಕುಮಾರ್ ಹಾಗೂ ಡಾ.ಆಶಾಲತಾ ಮಲ್ಲಾಪುರ್ ಮತ್ತು ಡಾ.ಉಮೇಶ್ ರಾಮದುರ್ಗ ಅವರು ಕೂಡ ಪಾಲ್ಗೊಂಡಿದ್ದರು.

Dr Prabhakar Kore Participated in Research Meeting on Reducing Anaemia in Pregnancy due to Iron Deficiency at Royal College of Medicine London,Organised by Children Investment Fund Foundation ( CIFF UK based NGO).With Researchers from Thomas Jefferson University, University of Minnesota, University of Alabama lead by Dr Richard Derman, Dr Michael Auerbach and Dr Michael Georgieff. Also from KAHER’s JNMC BELGAVI lead by Dr Shivaprasad Goudar,Dr MB Bellad,Roopa Bellad, Dr Manjunath Somannavar,Dr Umesh Charantimath , Dr Yogesh Kumar and also Dr Ashalata Mallapur and Dr Umesh Ramdurg from JNMC.

 

https://pragati.taskdun.com/latest/arrest-of-mr-muruga/

 

https://pragati.taskdun.com/latest/certificate-of-authenticity/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button