Kannada NewsLatest

ಡಾ.ಪ್ರಭಾಕರ ಕೋರೆಗೆ ಸಕ್ಕರೆ ಉದ್ಯೋಗ ಗೌರವ ಪುರಸ್ಕಾರ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ದಿ.ಡೆಕ್ಕನ್ ಶುಗರ್ ಟೆಕ್ನಾಲಜಿಸ್ಟ್ ಅಸೋಸಿಯೇಷನ್ ಇಂಡಿಯಾ ತನ್ನ 67ನೇ ವಾರ್ಷಿಕ ಕನ್ವೇಷನ್ ಮತ್ತು ಶುಗರ್ ಎಕ್ಸಪೋ-2022ರ ಭವ್ಯ ಸಮಾರಂಭದಲ್ಲಿ ‘ಸಕ್ಕರೆ ಉದ್ಯೋಗ ಗೌರವ ಪುರಸ್ಕಾರ’ವನ್ನು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರಿಗೆ ಪುಣೆಯಲ್ಲಿ ಪ್ರದಾನ ಮಾಡಿತು.

ಹಲವು ವರ್ಷಗಳಿಂದ ಸಕ್ಕರೆ ಉತ್ಪಾದನಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಹಿನ್ನೆಲೆಯಲ್ಲಿ ಈ ಪ್ರಶಸ್ತಿಯನ್ನು ಕೊಡಮಾಡಲಾಗಿದೆ. ಕೇಂದ್ರದ ಮಾಜಿ ಸಚಿವ ಪದ್ಮ ವಿಭೂಷಣ ಶರದ್ ಪವಾರ್ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಸಂಸದರಾದ ಕಲ್ಲಪ್ಪಣ್ಣಾ ಅವಾಡೆ, ರಾಷ್ಟ್ರೀಯ ಸಕ್ಕರೆ ಇನ್ಸಟ್ಯೂಟ್ ನಿರ್ದೇಶಕರಾದ ನರೇಂದ್ರ ಮೋಹನ, ಮಹಾರಾಷ್ಟ್ರದ ಸಕ್ಕರೆ ಆಯುಕ್ತರಾದ ಶೇಖರ ಗಾಯಕವಾಡ್, ಡೆಕ್ಕನ್ ಶುಗರ್ ಟೆಕ್ನಾಲಜಿಸ್ಟ್ ಅಸೋಸಿಯೇಷನ್ ಇಂಡಿಯಾದ ಅಧ್ಯಕ್ಷ ಎಸ್.ಎಸ್.ಗಂಗಾವತಿ ಉಪಸ್ಥಿತರಿದ್ದರು.

ಪ್ರಿಯಾಂಕ್ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ

Home add -Advt

https://pragati.taskdun.com/politics/cm-basavaraj-bommaiattackpriyank-kharge/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button