ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಚಿಕಿತ್ಸೆ ನೀಡಿದ್ದ ರಮಣಶ್ರೀ ಆಸ್ಪತ್ರೆ ವೈದ್ಯ ಡಾ.ರಮಣ್ ರಾವ್ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದೆ.
ಹೃದಯಾಘಾತದಿಂದ ನಿಧನರಾಗಿದ್ದ ಪುನೀತ್ ರಾಜ್ ಕುಮಾರ್ ಅವರಿಗೆ ಚಿಕಿತ್ಸೆ ನೀಡಿದ್ದ ಡಾ.ರಮಣ್ ರಾವ್ ವಿರುದ್ಧ ಚಿಕಿತ್ಸೆಯಲ್ಲಿ ಲೋಪ ಆರೋಪದ ಮೇರೆಗೆ ಇತ್ತೀಚೆಗೆ ಪುನೀತ್ ಅಭಿಮಾನಿಯೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರ ಬೆನ್ನಲ್ಲೇ ಇದೀಗ ಕನ್ನಡ ಹಾಗೂ ಜನಪರ ಚಿಂತಕ ಡಾ.ಆರ್.ಪ್ರಸಾದ್ ಎಂಬುವವರು ಡಾ.ರಮಣ್ ರಾವ್ ವಿರುದ್ಧ ಸದಾಶಿವನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪುನೀತ್ ಆಸ್ಪತ್ರೆಗೆ ಬಂದಾಗ ಹೃದಯಾಘಾತದ ಸೂಚನೆ ಕಂಡುಬಂದರೂ ಕೂಡ ಸಮೀಪದ ಎಂ.ಎಸ್.ರಾಮಯ್ಯ ಹೃದಯ ಘಟಕಕ್ಕೆ ಕಳುಹಿಸದೇ ವಿಕ್ರಂ ಆಸ್ಪತ್ರೆಗೆ ಕಳುಹಿಸಿ ನಿರ್ಲಕ್ಷ್ಯ ಮೆರೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದು ವೈದ್ಯ ವೃತ್ತಿಗೆ ಮಾಡಿದ ಕರ್ತವ್ಯ ಲೋಪವಾಗಿದ್ದು, ಡಾ.ರಮಣ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಅಲ್ಲದೇ ಪುನೀತ್ ನಿಗೂಢ ಸಾವಿನ ಬಗ್ಗೆ ತನಿಖೆ ನಡೆಸುವಂತೆಯೂ ಆಗ್ರಹಿಸಿದ್ದಾರೆ.
ಪುನೀತ್ ರಾಜಕುಮಾರ್ ಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ಡಾ.ರಮಣರಾವ್ ಮನೆಗೆ ಪೊಲೀಸ್ ಭದ್ರತೆ
ಪದ್ಮಶ್ರೀ ಒಂದು ಗೌರವ, ಆದರೆ ಅಪ್ಪು ಯಾವತ್ತಿಗೂ ಅಮರಶ್ರೀ ಎಂದ ಶಿವರಾಜ್ ಕುಮಾರ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ