Kannada NewsKarnataka NewsLatest

*ಪತ್ನಿ ಫೋಟೋ, ಮೊಬೈಲ್ ನಂಬರ್ ಫೇಸ್ ಬುಕ್ ಗೆ ಹಾಕಿ ’ಕಾಲ್ ಗರ್ಲ್’ ಎಂದು ಪೋಸ್ಟ್ ಮಾಡಿದ ಪತಿ*

ಪ್ರಗತಿವಾಹಿನಿ ಸುದ್ದಿ: ಇಲ್ಲೋರ್ವ ಪತಿ ಮಹಾಶಯ ಪತ್ನಿಗೆ ಕೊಡಬಾರದ ಹಿಂಸೆ ಕೊಟ್ಟಿದ್ದೂ ಅಲ್ಲದೇ ಆಕೆಯ ಫೋಟೋ, ಮೊಬೈಲ್ ನಂಬರ್ ಗಳನ್ನು ಫೇಸ್ ಬುಕ್ ನಲ್ಲಿ ಪ್ರತ್ಯೇಕ ಖಾತೆ ತೆಗೆದು ಕಾಲ್ ಗರ್ಲ್ ಎಂದು ಹಾಕಿ ಪೋಸ್ಟ್ ಮಾಡಿರುವ ಘಟನೆ ನಡೆದಿದೆ.

Home add -Advt

ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪತಿ ಸತ್ಯನಾರಾಯಣ ರೆಡ್ಡಿ ಎಂಬಾತ ಈ ರೀತಿ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

2019ರಲ್ಲಿ ಸತ್ಯನಾರಾಯಣ ರೆಡ್ಡಿ ವಿವಾಹವಾಗಿದ್ದ. ಆದರೆ ಪತ್ನಿಗೆ ಸದಾ ಕಿರುಕುಳ ನೀಡಿತ್ತಿದ್ದ. ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಿಂಸಿಸುತ್ತಿದ್ದ. ಪತಿಯ ಹಿಂಸೆಗೆ ಬೇಸತ್ತು ಪತ್ನಿ ಕಳೆದ ಒಂದು ವರ್ಷದಿಂದ ಆತನಿಂದ ದೂರವಾಗಿ ವಾಸವಾಗಿದ್ದಳು. ಆದರೂ ಪತಿಯ ಕಾಟ ತಪ್ಪಿಲ್ಲ.

ಈಗ ಫೇಸ್ ಬುಕ್ ನಲ್ಲಿ ಅಕೌಂಟ್ ಕ್ರಿಯೇಟ್ ಮಾಡಿ ಪತ್ನಿಯ ಫೋಟೋ, ಮೊಬೈಲ್ ನಂಬರ್ ಹಾಗೂ ಪತ್ನಿಯ ಸಹೋದರನ ಮೊಬೈಲ್ ನಂಬರ್ ಗಳನ್ನು ಪೋಸ್ಟ್ ಮಾಡಿ ಕಾಲ್ ಗರ್ಲ್ ಬೇಕಿದ್ದರೆ ಕರೆ ಮಾಡಿ ಎಂದು ಪೋಸ್ಟ್ ಮಾಡಿದ್ದಾನೆ. ಇದರಿಂದ ಪತ್ನಿ ಹಾಗೂ ಆಕೆ ಸಹೋದರನಿಗೆ ನಿರಂತರ ಕರೆಗಳು ಬರಲಾರಂಭಿಸಿವೆ. ಬೇಸತ್ತ ಸಂತ್ರಸ್ತೆ ಹಾಗೂ ಆಕೆಯ ಸಹೋದರ ಮಹಾಲಕ್ಷ್ಮೀ ಲೇಔಟ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.


Related Articles

Back to top button