ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಇದೆ ಡಿಸೆಂಬರ್ ೫ ರಿಂದ ೮ರ ವರೆಗೆ ನಾಲ್ಕು ದಿನಗಳ ಕಾಲ ಬೆಳಗಾವಿ ನಾಗನೂರು ಶ್ರೀ ರುದ್ರಾಕ್ಷಿಮಠದ ಪೂಜ್ಯಶ್ರೀ ಲಿಂ. ಡಾ. ಶಿವಬಸವ ಮಹಾಸ್ವಾಮಿಜಿಯವರ ೧೩೦ನೆಯ ಜಯಂತಿ ಮಹೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು ನಡೆಯಲಿವೆ.
ಶ್ರೀಮನ್ನಿರಂಜನ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಎಡೆಯೂರು ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಡಂಬಳ-ಗದಗ ನಾಗನೂರು ಶ್ರೀ ರುದ್ರಾಕ್ಷಿಮಠ ಬೆಳಗಾವಿ ಇವರ ಸನ್ನಿಧಾನದಲ್ಲಿ ಜರುಗಲಿರುವ ಕಾರ್ಯಕ್ರಮಗಳ ನೇತೃತ್ವವನ್ನು ಬೆಳಗಾವಿ ನಾಗನೂರು ಶ್ರೀ ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಸ್ವಾಮಿಗಳು ವಹಿಸಲಿದ್ದಾರೆ.
ಬೆಳಗಾವಿ ಶಿವಬಸವನಗರದ ಆರ್. ಎನ್. ಶೆಟ್ಟಿ ಪಾಲಿಟೆಕ್ನಿಕ್ ಆವರಣದಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಗುರುವಾರ ಡಿಸೆಂಬರ್ ೫ ರಂದು ಮುಂಜಾನೆ ೯ ಗಂಟೆಗೆ ಷಟ್‌ಸ್ಥಲ ಧ್ವಜಾರೋಹಣ ನಡೆಯುವುದು. ಸಾಯಂಕಾಲ ೫ ಗಂಟೆಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರುಗಲಿದೆ.
ಕಿತ್ತೂರಿನ ಸಂಸ್ಥಾನ ಕಲ್ಮಠದ ಪೂಜ್ಯಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದು, ಅಧ್ಯಕ್ಷತೆಯನ್ನು ಕಡೋಲಿ ದುರುದುಂಡೀಶ್ವರಮಠದ ಪೂಜ್ಯಶ್ರೀ ಗುರುಬಸವಲಿಂಗ ಮಹಾಸ್ವಾಮಿಗಳು ಹಾಗೂ ಬಸವನಬಾಗೇವಾಡಿ ವಿರಕ್ತಮಠದ ಪೂಜ್ಯಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ನೇತೃತ್ವ ವಹಿಸುತ್ತಾರೆ. ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯ ಎಸ್. ಆರ್. ಪಾಟೀಲ ಆಗಮಿಸಲಿದ್ದಾರೆ.
ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಶಿವಾಜಿ ಕಾಗಣೀಕರ, ಕಡೋಲಿ , ಡಾ. ಎಸ್. ಆರ್. ಗುಂಜಾಳ, ಧಾರವಾಡ, ಹೂಲಿ ಶೇಖರ್ ಹೂಲಿ, ಹೊಳಬಸಯ್ಯ ದುಂಡಯ್ಯ ಸಂಬಾಳದ, ಲೋಕಾಪುರ ಇವರುಗಳನ್ನು ಶ್ರೀಮಠದಿಂದ ವಿಶೇಷವಾಗಿ ಗೌರವಿಸಲಾಗುತ್ತಿದೆ. ಮಹಾಂತೇಶ ರಣಗಟ್ಟಿಮಠ, ಬಸವನಕುಡಚಿ, ವಿನಯ ಢವಳಿ, ಬೆಳಗಾವಿ, ಶಿವಪ್ಪ ಶಮರಂತ, ಯಮಕನಮರಡಿ, ಕಸ್ತೂರಿ ಭಾವಿ, ಬೆಳಗಾವಿ ಇವರುಗಳಿಗೆ ’ಕನ್ನಡ ನುಡಿಶ್ರೀ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುತ್ತಿದೆ.
ಶುಕ್ರವಾರ ೬ ರಂದು ಸಾಯಂಕಾಲ ೫ ಗಂಟೆಗೆ ಹಳೆಯ ವಿದ್ಯಾರ್ಥಿಗಳ ಸಮಾವೇಶ ಹಾಗೂ ಮಕ್ಕಳ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದ್ದು ದಿವ್ಯಸಾನಿಧ್ಯವನ್ನು ಪೂಜ್ಯಶ್ರೀ ಸದಾಶಿವ ಮಹಾಸ್ವಾಮಿಗಳು ಹುಕ್ಕೇರಿಮಠ, ಹಾವೇರಿ ವಹಿಸಲಿದ್ದಾರೆ. ನೇತೃತ್ವವನ್ನು ಪೂಜ್ಯಶ್ರೀ ಗುರುಸಿದ್ಧ ಮಹಾಸ್ವಾಮಿಗಳು ಕಾರಂಜಿಮಠ, ಬೆಳಗಾವಿ ಹಾಗೂ ಪೂಜ್ಯಶ್ರೀ ಪ್ರಭುಚನ್ನಬಸವ ಮಹಾಸ್ವಾಮಿಗಳು ಮೋಟಗಿಮಠ, ಅಥಣಿ ಇವರು ವಹಿಸಲಿದ್ದಾರೆ.
ಅಧ್ಯಕ್ಷತೆಯನ್ನು ಪ್ರೊ. ಎಂ. ಆರ್. ಉಳ್ಳೇಗಡ್ಡಿ ಅಧ್ಯಕ್ಷರು,ನಾಗನೂರು ಪ್ರಸಾದ ನಿಲಯಗಳ ಹಳೆಯ ವಿದ್ಯಾರ್ಥಿಗಳ ಸಂಘ ಇವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಜಯಪುರ ಜಿಲ್ಲಾ ಪಂಚಾಯತ ಸಿ.ಇ.ಒ ಗೋವಿಂದ ರೆಡ್ಡಿ ಆಗಮಿಸಲಿದ್ದಾರೆ. ಬಸವರಾಜ ಎಂ. ಹಟ್ಟಿಗೌಡರ, ಘಟಪ್ರಭಾ, ಎಸ್. ವ್ಹಿ. ದಳವಾಯಿ, ಬೆಳಗಾವಿ, ಎಂ. ಡಿ. ಪಾಟೀಲ, ಹುಬ್ಬಳ್ಳಿ , ಮಹಾಂತೇಶ ಶಿ. ಘಟಗಿ, ತುಬಚಿ ಇವರುಗಳಿಗೆ ಶ್ರೀಮಠದಿಂದ ಕೊಡಮಾಡುವ ’ಪ್ರಸಾದಶ್ರೀ’ ಗೌರವ ಪ್ರದಾನ ಮಾಡಲಾಗುವುದು.
ಅದೇ ರೀತಿ ಮಕ್ಕಳ ಸಾಹಿತ್ಯ ಪ್ರಶಸ್ತಿಗಳಾದ ಹರ್ಡೇಕರ ಮಂಜಪ್ಪ ಪ್ರಶಸ್ತಿಯನ್ನು ಚಂದ್ರಕಾಂತ ಕರದಳ್ಳಿ, ಶಹಾಪುರ ಇವರಿಗೂ ಮತ್ತು ಡೆಪ್ಯೂಟಿ ಚನ್ನಬಸಪ್ಪ ಪ್ರಶಸ್ತಿಯನ್ನು ಎ. ಕೆ. ರಾಮೇಶ್ವರ, ಕಲಬುರ್ಗಿ ಇವರುಗಳಿಗೆ ನೀಡಿ ಗೌರವಿಸಲಾಗುವುದು. ಇದೇ ಸಂದರ್ಭದಲ್ಲಿ ವಿಜಯ ಕುಚನೂರ ಕೆ.ಪಿ.ಎಸ್.ಸಿ ಸದಸ್ಯರು, ಬೆಳಗಾವಿ ಮತ್ತು ಬಿ. ಎಸ್. ಕಲ್ಲೂರ ನಿವೃತ್ತ ಕಮಾಂಡರ್, ಬೆಳಗಾವಿ (ದೆಹಲಿ) ಇವರನ್ನು ಸಹ ವಿಶೇಷವಾಗಿ ಸನ್ಮಾನಿಸಲಾಗುವುದು.
ಶನಿವಾರ ದಿನಾಂಕ ೭ ರಂದು ಸಾಯಂಕಾಲ ೫ ಗಂಟೆಗೆ ನಾಗನೂರು ಶ್ರೀ ರುದ್ರಾಕ್ಷಿಮಠ ಗದಗಿನ ಎಡೆಯೂರು ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಶ್ರೀಮನ್ನಿರಂಜನ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ’ಸೇವಾರತ್ನ’ ಹಾಗೂ ’ಆತ್ಮಸ್ವಾಸ್ಥ್ಯಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಅಧ್ಯಕ್ಷತೆಯನ್ನು ಹಂದಿಗುಂದ ವಿರಕ್ತಮಠದ ಪೂಜ್ಯಶ್ರೀ ಶಿವಾನಂದ ಮಹಾಸ್ವಾಮಿಗಳು ವಹಿಸುವರು. ’ಆತ್ಮಸ್ವಾಸ್ಥ್ಯಶ್ರೀ’ ಪ್ರಶಸ್ತಿಯನ್ನು ಶ್ರೀ ಆಹಿರ್ ಶಾಂತಿ,ಮೌಂಟ ಅಬು ಇವರಿಗೆ ನೀಡಿ ಗೌರವಿಸಲಾಗುವುದು. ಪ್ರೊ. ಲಕ್ಷ್ಮಣಕುಮಾರ ಸಣ್ಣೆಲ್ಲಪ್ಪನವರ, ಧಾರವಾಡ, ಆರ್. ಎಂ. ಹೆಗಡೆ, ಶಿರಸಿ, ಸುಭಾಸ ಇಂಗಳೇಶ್ವರ, ವಿಜಯಪುರ , ರತ್ನಕ್ಕ ಪಾಟೀಲ, ಗದಗ, ಮಹಮ್ಮದ ಕುಂಞ, ಮಂಗಳೂರು ಪ್ರೊ. ಎಂ. ಆರ್. ಉಳ್ಳೆಗಡ್ಡಿ, ಬೆಳಗಾವಿ ,ಪ್ರೊ. ರಂಗರಾಜ ವನದುರ್ಗ ಧಾರವಾಡ, ಬಿ. ಬಿ. ಹೊಸಮನಿ , ಬೆಳಗಾವಿ ಇವರುಗಳನ್ನು ಶ್ರೀಮಠದಿಂದ ಕೊಡಮಾಡುವ ’ಸೇವಾರತ್ನ’ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು.
ನಾಲ್ಕೂ ದಿನಗಳ ಕಾರ್ಯಕ್ರಮಗಳಲ್ಲಿ ಪ್ರೊ. ಬಿ. ಆರ್. ಪೋಲಿಸ್‌ಪಾಟೀಲ ವಿರಚಿತ ಮಹಾವೃಕ್ಷ (ಕಾದಂಬರಿ), ಆರ್. ಪಿ. ಅಪರಾಜವಿರಚಿತ ಬಸವಧರ್ಮ ಅಂದು-ಇಂದು , ಡಾ. ರಾಮಕೃಷ್ಣ ಮರಾಠೆ ವಿರಚಿತ ಶಿವಬಸವ ಸಂಪುಟ, ’ಕನ್ನಡದ ಕಾಯಕಯೋಗಿ’ ಧ್ವನಿತಟ್ಟೆ ಮುಂತಾದ ಕೃತಿಗಳು ಲೋಕಾರ್ಪಣೆಗೊಳ್ಳಲಿವೆ.
ರವಿವಾರ ದಿನಾಂಕ ೮ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಡಾ. ಶಿವಬಸವ ಮಹಾಸ್ವಾಮಿಗಳವರ ಜಯಂತಿಯನ್ನು ಆಚರಿಸಲಾಗುವುದು. ಸ್ವರ ನಮನವನ್ನು ಅಕ್ಕನ ಬಳಗ, ಹನುಮನ ಬೀದಿ, ಬೆಳಗಾವಿ, ಶ್ರೀ ಪ್ರಭುದೇವ ಪ್ರತಿಷ್ಠಾನ, ಮಾತೃಮಂಡಳಿ, ಬೆಳಗಾವಿ, ಪಂ.ಸೋಮಶೇಖರ ಮರಡಿಮಠ, ಧಾರವಾಡ, ಉಮಾದೇವಿ ರಾಜಶೇಖರ ನಿಜಗುಲಿ, ಬೆಳಗಾವಿ, ಮನೋರಮಾ ಹಣ್ಮಟ್ಟೇಕರ, ಬೆಳಗಾವಿ ಇವರುಗಳು ಪ್ರಸ್ತುತ ಪಡಿಸಲಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ