Kannada NewsKarnataka NewsLatest

ಕ್ಷತ್ರೀಯ ಮರಾಠಾ ಸಮಾಜದ ಮಹಿಳಾ ಘಟಕದ ಅಧ್ಯಕ್ಷರಾಗಿ ಡಾ.ಸೋನಾಲಿ ಸರ್ನೋಬತ್

 

 ಪ್ರಗತಿವಾಹಿನಿ ಸುದ್ದಿ, ಖಾನಾಪುರ – ಖಾನಾಪುರದ  ಕ್ಷತ್ರಿಯ ಮರಾಠ ಸಮಾಜ ಸಭಾಗೃಹದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಆಚರಿಸಲಾಯಿತು.

ಇದೇ ವೇಳೆ ಕ್ಷತ್ರಿಯ ಮರಾಠ ಸಮಾಜದ ಮಹಿಳಾ ಅಧ್ಯಕ್ಷೆಯಾಗಿ ಡಾ.ಸೋನಾಲಿ ಸರನೋಬತ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಈ ವೇಳೆ ಕ್ಷತ್ರಿಯ ಮರಾಠ ಸಮಾಜದ ಅಧ್ಯಕ್ಷ ಅಭಿಲಾಷ ದೇಸಾಯಿ, ಉಪಾಧ್ಯಕ್ಷ ದಿಲೀಪ ಪವಾರ, ನಾರಾಯಣ ಮಾಯೇಕರ, ಅಪ್ಪಯ್ಯ ಗುರವ,  ಎಚ್.ಎಂ.ದೇಸಾಯಿ, ಬಿ.ಎಂ.ಭೋಸಲೆ ಸರ್, ಪ್ರಕಾಶ ಬೈಲೂರಕರ, ಶ್ರೀಕಾಂತ ಹರಕೇರಿ, ರಮೇಶ ಪಾಟೀಲ, ಅಮೋಲ್ ಬೆಳಗಾಂವಕರ, ರಮೇಶ ಪಾಟೀಲ, ಬಸವರಾಜ ಕಡೇಮನಿ, ಈಶ್ವರ ಕಡೇಮನಿ, ಜಿ.  ವಿಠ್ಠಲ್ ನಿಡಗಲ್ಕರ್, ಬಾಳೇಶ ಚವಣ್ಣವರ, ಕುಶಾಲ ಅಂಬೋಜಿ, ಮಹೇಶ ಗುರವ, ನಾಗೇಶ ಧರ್ಮೋಜಿ ಉಪಸ್ಥಿತರಿದ್ದರು.
ತದನಂತರ  ಮಾತನಾಡಿದ ಡಾ.ಸೋನಾಲಿ ಸರನೋಬತ್ ಖಾನಾಪುರ ಅಭಿವೃದ್ಧಿಗೆ ಜಾತಿ ಭೇದ ಮರೆತು ಎಲ್ಲ ಜಾತಿ, ಧರ್ಮದವರು ಒಗ್ಗೂಡಬೇಕಿದೆ ಎಂದರು.

 ಮರಾಠರು ಹುಟ್ಟು ಹೋರಾಟಗಾರರು ಮತ್ತು ಯಾವಾಗಲೂ ಮಾತೃಭೂಮಿಗಾಗಿ ಸಮರ್ಪಣೆಗೆ ಹೆಸರುವಾಸಿಯಾಗಿದ್ದಾರೆ.  ಮರಾಠಾ ಲಘು ಪದಾತಿ ಸೈನ್ಯವು ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ.   ಖಾನಾಪುರದ ಅಭಿವೃದ್ಧಿ ಪಥದತ್ತ ತರಲು ಹೆಚ್ಚು ಹೆಚ್ಚು ಜವಾಬ್ದಾರಿಯಿಂದ ಕೆಲಸ ಮಾಡುತ್ತೇನೆ ಎಂದರು.

ಅದಾದ ನಂತರ ಮಾತನಾಡಿದ  ದಿಲೀಪ್ ಪವಾರ್ ತಮ್ಮ ಭಾಷಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಭವ್ಯ ಇತಿಹಾಸದ ಬಗ್ಗೆ ತಿಳಿಸಿದರು.  ಅಭಿಲಾಷ್ ದೇಸಾಯಿ ವಂದಿಸಿದರು.

13 ವರ್ಷದ ಬಾಲಕನಿಗೆ ಅಶ್ಲೀಲ ಮೆಸೇಜ್ : ಫೇಸ್‌ಬುಕ್‌ ಮಾಜಿ ಅಧಿಕಾರಿ ಬಂಧನ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button