Kannada NewsKarnataka NewsLatest

ಅವಘಡಗಳ ಗಾಯಾಳುಗಳನ್ನು ಭೇಟಿ ಮಾಡಿದ ಡಾ. ಸೋನಾಲಿ ಸರನೋಬತ್

ಪ್ರಗತಿವಾಹಿನಿ ಸುದ್ದಿ, ಬೇಟಾಣೆ (ಖಾನಾಪುರ): ಮಿನಿ ಗ್ಯಾಸ್ ಸಿಲಿಂಡರ್ ಸ್ಫೋಟದಲ್ಲಿ ಗಾಯಗೊಂಡು ಚಿಕಿತ್ಸೆಯಲ್ಲಿರುವ ಇಬ್ಬರು  ಗಾಯಾಳುಗಳನ್ನು ಡಾ ಸೋನಾಲಿ ಸರ್ನೋಬತ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

ತುಳಸಿ ವಿವಾಹ ಸಂದರ್ಭದಲ್ಲಿ ರಾತ್ರಿ ಅಡುಗೆ ತಯಾರಿಸುವ ವೇಳೆ ರಾಮ ಗಾವಡೆ ಮತ್ತು ಶೀತಲ್ ಗಾವಡೆ ಗಂಭೀರ ಗಾಯಗೊಂಡು ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

Home add -Advt

ಡಾ. ಸೋನಾಲಿ ಸರ್ನೋಬತ್ ಅವರು ಆರ್‌ಎಂಒ ಸರೋಜಾ ತಿಗಡಿ ಮತ್ತು ಪ್ರಭಾರಿ ವೈದ್ಯರೊಂದಿಗೆ ರೋಗಿಗಳ ಸ್ಥಿತಿಗತಿ ಕುರಿತು ಚರ್ಚಿಸಿದರು. ಈ ಇಬ್ಬರೂ ಗಾಯಾಳುಗಳ ಚಿಕಿತ್ಸೆಯಲ್ಲಿ ಪೂರ್ಣ ಪ್ರಮಾಣದ ಸಹಾಯ, ಸಹಕಾರ ಒದಗಿಸುವ ಭರವಸೆ ನೀಡಿದರು.

ನಾಯ್ಕ್ ಗಲ್ಲಿಯಲ್ಲಿ ವಿದ್ಯುತ್ ಸ್ಪರ್ಶದಿಂದ ಗಾಯಗೊಂಡ ಮತ್ತೋರ್ವ ಗಾಯಾಳು, ಖಾನಾಪುರ ಕರಿಯಪ್ಪ ಮರಿಯಪ್ಪ ನಾಯ್ಕ್ ಅವರನ್ನು ಸಹ ಭೇಟಿ ಮಾಡಿದ ಡಾ. ಸೋನಾಲಿ ಸರನೋಬತ್,   ಅವರ ಒಂದು ಕೈ ಕಳೆದುಕೊಂಡು ಗಂಭೀರ ಗಾಯಗೊಂಡಿರುವ ಕರಿಯಪ್ಪ ಅವರಿಗೆ ಸರಕಾರದಿಂದ ನೆರವು  ಕೊಡಿಸುವುದಾಗಿ ಭರವಸೆ ನೀಡಿದರು.

ತಾವು ಸ್ಪರ್ಧಿಸುವ ಕ್ಷೇತ್ರದ ಬಗ್ಗೆ ಸಿದ್ದರಾಮಯ್ಯಹೇಳಿದ್ದೇನು?

Related Articles

Back to top button