ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಖಾನಾಪುರ ತಾಲೂಕಿನ ಭೀಮಗಡ ದಟ್ಟಾರಣ್ಯ ಪ್ರದೇಶದ ದೇಗಾಂವ್ ಎನ್ನುವ ಕುಗ್ರಾಮದ ಜನರಿಗೆ ಕಿರಾಣಿ ಸಾಮಗ್ರಿ ಮತ್ತು ಔಷಧಗಳನ್ನು ಪೂರೈಸುವ ಮೂಲಕ ಬೆಳಗಾವಿಯ ನಿಯತಿ ಫೌಂಡೇಶನ್ ಮಾದರಿ ಕಾರ್ಯ ಮಾಡಿದೆ.
ಫೌಂಡೇಶನ್ ಅಧ್ಯಕ್ಷೆ ಡಾ.ಸೋನಾಲಿ ಸರ್ನೋಬತ್ ನೇತೃತ್ವದ ತಂಡ ದೇಗಾಂವ್ ಗ್ರಾಮಕ್ಕೆ ತೆರಳಿ ಅವರಿಗೆ ಅಗತ್ಯ ವಸ್ತುಗಳನ್ನು ವಿತರಿಸಿತು.
ದೇಗಾಂವ್ ಜನರು ಎಲ್ಲ ಮೂಲಭೂತ ಸೌಲಭ್ಯಗಳಿಂದ ವಂಚಿರಾಗಿದ್ದು, ಸಣ್ಣ ವಸ್ತು ಬೇಕೆಂದರೂ ಖಾನಾಪುರಕ್ಕೆ ಬರಬೇಕು. ಆದರ ಈಗಿನ ಲಾಕ್ ಡೌನ್ ಸಂದರ್ಭದಲ್ಲಿ ಅವರು ಸಂಕಷ್ಟದಲ್ಲಿದ್ದರು. ಅಲ್ಲಿನ ಕಾರ್ಯಕರ್ತರೊರ್ವರು ನಿಯತಿ ಫೌಂಡೇಶನ್ ಸಂಪರ್ಕಿಸಿ ಪರಿಸ್ಥಿತಿಯನ್ನು ವಿರಿಸಿದರು.
ತಕ್ಷಣ ಸ್ಪಂದಿಸಿದ ಡಾ.ಸೋನಾಲಿ ಸರ್ನೋಬತ್ ಅಗತ್ಯ ಸಾಮಗ್ರಿಗಳೊಂದಿಗೆ ಹಳ್ಳಿಗೆ ತೆರಳಿ ಆರೋಗ್ಯ ಕುರಿತು ತಿಳಿವಳಿಕೆ ನೀಡಿದ್ದಲ್ಲದೆ, ಅಗತ್ಯ ವಸ್ತುಗಳನ್ನು ವಿತರಿಸಿದರು. 40 ಮನೆಗಳಿರುವ ಗ್ರಾಮದಲ್ಲಿ 200 ರಷ್ಟು ಜನಸಂಖ್ಯೆ ಇದೆ. ಜನರಿಗೆ ಸಧ್ಯದ ಕೊರೋನಾ ಕುರಿತು ತಿಳಿವಳಿಕೆ ಇದ್ದು, ಮಾಸ್ಕ್ ಬಳಕೆಯನ್ನೂ ಮಾಡುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಸಧ್ಯ ಲಭ್ಯವಿರುವ ಬೆಡ್ ಮಾಹಿತಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ