Kannada NewsKarnataka News

ನೊಂದ ಕುಟುಂಬಕ್ಕೆ ಸಹಾಯ ಹಸ್ತ ಚಾಚಿದ ಡಾ. ಸೋನಾಲಿ ಸರ್ನೋಬತ್

ಪ್ರಗತಿ ವಾಹಿನಿ ಸುದ್ದಿ ಖಾನಾಪುರ – 

ಖಾನಾಪುರ ತಾಲೂಕಿನ ಇಟಗಿ ಗ್ರಾಮದಲ್ಲಿ ಸುರಿದ ಭಾರಿ ಮಳೆ ಮತ್ತು ಗಾಳಿಯಿಂದ ಮನೆ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದ ಬಡ ವಿಧವೆಯೊಬ್ಬರ ಕುಟುಂಬಕ್ಕೆ ಬೆಳಗಾವಿ ಬಿಜೆಪಿ ಗ್ರಾಮೀಣ ಉಪಾಧ್ಯಕ್ಷೆ ಡಾ. ಸೋನಾಲಿ ಸರ್ನೋಬತ್ ಅವರು ತಮ್ಮ ನಿಯತಿ ಫೌಂಡೇಶನ್ ವತಿಯಿಂದ ಸಹಾಯ ಒದಗಿಸುವ ಮೂಲಕ ಮಾದರಿ ಕಾರ್ಯ ಮಾಡಿದ್ದಾರೆ.

Home add -Advt

ಮಾರ್ಚ್ ೨೨ರಂದು ಸುರಿದ ಭಾರಿ ಮಳೆ ಮತ್ತು ಗಾಳಿಗೆ ಇಟಗಿ ಗ್ರಾಮದ ವಿಧವೆ ನೀಲವ್ವ ಯಲ್ಲಪ್ಪ ಕುರುಬರ್ ಮನೆಯ ಮೇಲ್ಛಾವಣಿ ಹಾರಿ ಹೋಗಿದೆ. ೧೬ ವರ್ಷದ ಮಗನ ಜೊತೆ ವಾಸ ಮಾಡುತ್ತಿರುವ ಈ ಬಡ ಮಹಿಳೆ ಕೂಲಿ ಕೆಲಸ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದಾರೆ. ಇವರ ಕುಟುಂಬ ಮನೆ ಹಾನಿಗೊಳಗಾಗಿ ಕಂಗಾಲಾಗಿತ್ತು.

ಸುದ್ದಿ ತಿಳಿದ ಡಾ. ಸೋನಾಲಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತಮ್ಮ ನಿಯತಿ ಫೌಂಡೇಶನ್ ವತಿಯಿಂದ ಸಹಾಯ ಧನವನ್ನು ನೀಡಿದ್ದಾರೆ. ಅಲ್ಲದೇ ಸರಕಾರದಿಂದ ಒದಗುವ ಸಹಾಯಧನವನ್ನು ಶೀಘ್ರದಲ್ಲಿ ಒದಗಿಸಲು ನೆರವಾಗುವುದಾಗಿ ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ಯುವ ಮುಖಂಡರಾದ ಕುಶಾಲ್ ಅಂಬೋಜಿ, ಬಾಲೇಶ್ ಚವನ್ನವರ್ ಮತ್ತಿತರರು ಇದ್ದರು.

ಅಪ್ಪು ಕೊನೆಯ ಚಿತ್ರ ಜೇಮ್ಸ್ ಪ್ರದರ್ಶನಕ್ಕೆ ಬಿಜೆಪಿಯಿಂದ ಅಡ್ಡಿ? : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟೀಕರಣ

Related Articles

Back to top button