ಪ್ರಗತಿವಾಹಿನಿ ಸುದ್ದಿ : ಭಾರತದ ಬಾಹ್ಯಾಕಾಶ ವಿಜ್ಞಾನ ಸಂಸ್ಥೆಯ ಮುಖ್ಯಸ್ಥರಾದ ಎಸ್. ಸೋಮನಾಥ್ ಅವರ ಅಧಿಕಾರಾವಧಿ ಜ. 14 ಕ್ಕೆ ಮುಗಿಯಲಿದೆ. ಅವರ ಸ್ಥಾನಕ್ಕೆ ಹಿರಿಯ ವಿಜ್ಞಾನಿ ಹಾಗೂ ಪ್ರಸ್ತುತ LPSC ನಿರ್ದೇಶಕರಾದ ಡಾ. ವಿ. ನಾರಾಯಣನ್ ಅವರನ್ನು ನೇಮಕ ಮಾಡಲಾಗಿದೆ.
ಸಧ್ಯಕ್ಕೆ ಇಸ್ರೋ ಯೋಜನೆಗಳಾಗಿರುವ ಆದಿತ್ಯ ಮತ್ತು ಚಂದ್ರಯಾನ್ ಮಿಷನ್ ನ ನಿರ್ದೇಶನಕ ಹೊಣೆಗಾರಿಕೆಯನ್ನು ಡಾ. ನಾರಾಯಣನ್ ಅವರು ಹೊರಲಿದ್ದಾರೆ. ರಾಕೆಟ್ ಮತ್ತು ಬಾಹ್ಯಾಕಾಶ ನೌಕೆಗಳ ವಿಷಯದಲ್ಲಿ ಪರಿಣಿತ ತಜ್ಞರಾಗಿರುವ ನಾರಾಯಣನ್ ಅವರು ಸಿ25 ಕ್ರೈಜೋನಿಕ್ ಪ್ರಾಜೆಕ್ಟ್ ನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
ಆದಿತ್ಯ ಬಾಹ್ಯಾಕಾಶ ನೌಕೆ ಹಾಗೂ ಚಂದ್ರಯಾನ್ -3 ಯೋಜನೆಗಳಲ್ಲೂ ಸಹ ನಾರಾಯಣನ್ ಅವರ ಕೊಡುಗೆ ಸಾಕಷ್ಟಿದೆ. ಐಐಟಿ ಕಾನ್ಸರ್ ನ ಪದಕ ವಿಜೇತ ವಿದ್ಯಾರ್ಥಿಯಾಗಿದ್ದ ನಾರಾಯಣನ್ ಅವರು ಭಾರತೀಯ ಭಾಹ್ಯಾಕಾಶ ಸೊಸೈಟಿಯಿಂದ ಚಿನ್ನದ ಪದಕ ಹಾಗೂ ಎನ್‌ಡಿಆರ್‌ಎಫ್ ನ ನ್ಯಾಷನಲ್ ಡಿಸೈನ್ ಅವಾರ್ಡ್ ಗೆ ಭಾಜನರಾಗಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ