
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ ಸರಕಾರಿ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಕೀಯ ನಿರ್ದೇಶಕರಾಗಿ ಡಾ.ವಿನಯ ದಾಸ್ತಿಕೊಪ್ಪ ನೇಮಕವಾಗಿದ್ದಾರೆ.
ಮುಂದಿನ 4 ವರ್ಷಗಳ ಅವಧಿಗಾಗಿ ಅವರನ್ನು ನೇಮಿಸಲಾಗಿದೆ. ಈವರೆಗೆ ಎಸ್.ಟಿ.ಕಳಸದ ವೈದ್ಯಕೀಯ ನಿರ್ದೇಶಕರಾಗಿದ್ದರು. ಅವರ ಅವಧಿ ಮುಗಿದ ನಂತರವೂ 2 ವರ್ಷ ಕಾಲ ಸೇವೆಯನ್ನು ವಿಸ್ತರಿಸಲಾಗಿತ್ತು.

ವಿನಯ ದಾಸ್ತಿಕೊಪ್ಪ ಬೆಳಗಾವಿಯ ಜವಾಹರಲಾಲ್ ನೆಹರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮತ್ತು ಎಂಡಿ ಶಿಕ್ಷಣ ಪಡೆದಿದ್ದು, ನವದೆಹಲಿಯ ಏಮ್ಸ್ ನಲ್ಲಿ ರೆಟಿನಾ ಸರ್ಜರಿ ಕುರಿತು ತರಬೇತಿ ಪಡೆದಿದ್ದಾರೆ. ಸಧ್ಯ ಒಪ್ತೊಮಾಲಜಿ ಡಿಪಾರ್ಟ್ ಮೆಂಟ್ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸುತ್ತಿದ್ದರು.
ಬೆಳಗಾವಿ ಜಿಲ್ಲಾ ಆಸ್ಪತ್ರೆಯ ಅವ್ಯವಸ್ಥೆ ಕುರಿತು ಸಾಕಷ್ಟು ದೂರುಗಳಿವೆ. ಈಚೆಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ ಮತ್ತು ಶಾಸಕ ಅನಿಲ ಬೆನಕೆ ಹಲವು ಬಾರಿ ಭೇಟಿ ನೀಡಿ ಸುಧಾರಣೆಗೆ ಸೂಚನೆ ನೀಡಿದ್ದರು. ಈಗ ನೂತನ ವೈದ್ಯಕೀಯ ನಿರ್ದೇಶಕರು ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತಾರೆ ಕಾದು ನೋಡಬೇಕಿದೆ.
ಸಂಬಂಧಿಸಿದ ಸುದ್ದಿಗಳು –
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ