Latest

2ನೇ ಬಾರಿಗೆ ಅಮೆರಿಕ ಸರ್ಜನ್ ಜನರಲ್ ಆದ ಕನ್ನಡಿಗ

ಪ್ರಗತಿವಾಹಿನಿ ಸುದ್ದಿ; ವಾಷಿಂಗ್ಟನ್: ಕನ್ನಡಿಗ ಡಾ.ವಿವೇಕ್ ಮೂರ್ತಿ ಅಮೆರಿಕಾದಲ್ಲಿ ಮತ್ತೊಮ್ಮೆ ಉನ್ನತ ಹುದ್ದೆಗೇರಿದ್ದು, ಎರಡನೇ ಬಾರಿಗೆ ಸರ್ಜನ್ ಜನರಲ್ ಆಗಿ ಆಯ್ಕೆಯಾಗಿದ್ದಾರೆ.

ಅಮೆರಿಕ ನೂತನ ಅಧ್ಯಕ್ಷ ತಮ್ಮ ಹೆಲ್ತ್ ಟೀಂ ಬಗ್ಗೆ ಘೋಷಣೆ ಮಾಡಿದ್ದು, ಕ್ಸೆವಿಯರ್ ಬೆಕೆರಾ ಅವರನ್ನು ಆರೋಗ್ಯ ಮತ್ತು ಮಾನವ ಸೇವೆ ಕಾರ್ಯದರ್ಶಿಯಾಗಿ ಹಾಗೂ ಭಾರತದ ಮೂಲದ ಅಮೆರಿಕನ್ ಡಾ.ವಿವೇಕ್ ಮೂರ್ತಿ ಅವರನ್ನು ಸರ್ಜನ್ ಜನರಲ್ ಆಗಿ ನೇಮಕ ಮಾಡಿರುವುದಾಗಿ ತಿಳಿಸಿದ್ದಾರೆ.

ವಿವೇಕ್ ಮೂರ್ತಿ ಮೂಲತ: ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹಲಗೆರೆಯವರು. 2014ರಲ್ಲಿ ಬರಾಕ್ ಒಬಾಮ ಅಧ್ಯಕ್ಷರಾಗಿದ್ದಾಗ ವಿವೇಕ್ ಮೂರ್ತಿ ಅವರನ್ನು ಅಮೆರಿಕಾದ 19ನೇ ಸರ್ಜನ್ ಜನರಲ್ ಆಗಿ ನೇಮಕ ಮಾಡಿದ್ದರು. 2017ರ ಏಪ್ರಿಲ್ ವರೆಗೆ ಅವರು ಸರ್ಜನ್ ಜನರಲ್ ಆಗಿ ಕಾರ್ಯನಿರ್ವಹಿಸಿದ್ದರು. ಕಳೆದ ಹಲವಾರು ತಿಂಗಳಿಂದ ಕೊರೊನಾ ಸಾಂಕ್ರಿಮ ವಿಚಾರವಾಗಿ ಡಾ.ವಿವೇಕ್ ಮೂರ್ತಿ ವೈಯಕ್ತಿಕವಾಗಿ ಬೈಡನ್ ಗೆ ಸಲಹೆಗಳನ್ನು ನೀಡುತ್ತಿದ್ದರು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button