Cancer Hospital 2
Beereshwara 36
LaxmiTai 5

ಕೈ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿಗೆ ಶುಭ ಕೋರಿದ ಡಾ. ಸಿ.ಎಸ್. ದ್ವಾರಕನಾಥ

Anvekar 3
GIT add 2024-1

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ, ಕೆಪಿಸಿಸಿ ಕಾನೂನು ವಿಭಾಗದ ವಕ್ತಾರ ಡಾ. ಸಿ.ಎಸ್. ದ್ವಾರಕನಾಥ ಅವರು ಚಿಕ್ಕೋಡಿ ಲೋಕಸಭೆ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಶುಭ ಕೋರಿದರು.

ಕವಟಗಿಮಠ ನಗರದಲ್ಲಿ ಇರುವ ಮನೆಯಲ್ಲಿ ಚಿಕ್ಕೋಡಿ ಲೋಕಸಭೆ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರನ್ನು ಭೇಟಿ ಮಾಡಿದ ದ್ವಾರಕನಾಥ ಅವರು ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಿದರು.

Emergency Service

ಇದೇ ವೇಳೆ ಮಾತನಾಡಿದ ದ್ವಾರಕನಾಥ ಅವರು, ತಂದೆ, ಸಚಿವರಾದ‌ ಸತೀಶ್‌ ಜಾರಕಿಹೊಳಿ ಅವರ ಕಾರ್ಯಕ್ಷಮತೆ, ಅಭಿವೃದ್ಧಿ ಕೆಲಸ, ಸಮಾಜ ಸೇವೆ, ಕಾಂಗ್ರೆಸ್‌ ಪಕ್ಷ ನೀಡಿರುವ ಗ್ಯಾರಂಟಿ ಯೋಜನೆಗಳು ನಿಮ್ಮ ಗೆಲುವಿಗೆ ಸಹಕಾರಿಯಾಗಲಿವೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಬಂಡಾಯ ಸಾಹಿತಿ ಯಲ್ಲಪ್ಪ ಹಿಮ್ಮಡಿ, ಅಲೆಮಾರಿ ಬುಡಕಟ್ಟು ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗರಾಜ ವಕೀಲರು, ಸಂಜಯ ಲೋಕಾಪುರೆ, ಉದಯ ವಾಗ್ಮುರೆ, ರೀಹಾನಾ ನದಾಪ್, ಮಹಾದೇವ ಪೋಳ, ಸಂಜಯ ಲೋಕಾಪುರೆ, ದಯಾನಂದ ಕಾಂಬಳೆ ಸೇರಿದಂತೆ ಹಲವರು ಇದ್ದರು.

Bottom Add3
Bottom Ad 2