Latest

*ಮಗಳು ಹೀಗೆ ಮಾಡ್ತಾಳೆ ಅಂದುಕೊಂಡಿರ್ಲಿಲ್ಲ; ಕಿಡಿಕಾರಿದ ಕಾಗೋಡು ತಿಮ್ಮಪ್ಪ*

ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ಕಾಂಗ್ರೆಸ್ ಹಿರ್ಯ ನಾಯಕ, ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಪುತ್ರಿ ಡಾ.ರಾಜನಂದಿನಿ ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ರಾಜನಂದಿನಿ ಬಿಜೆಪಿ ಸೇರ್ಪಡೆಯಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬಿಜೆಪಿ ಬಾವುಟ ನೀಡಿ, ಪಕ್ಷಕ್ಕೆ ಸ್ವಾಗತಿಸಿದರು.

ಇತ್ತ ಮಗಳು ಬಿಜೆಪಿ ಸೇರ್ಪಡೆಗೆ ಅತ್ತ ಶಿವಮೊಗ್ಗದಲ್ಲಿ ಕಾಂಗ್ರೆಸ್ ನಾಯಕ ಕಾಗೋಡು ತಿಮ್ಮಪ್ಪ ಕಿಡಿಕಾರಿದ್ದಾರೆ. ಮಗಳು ರಾಜನಂದಿನಿ ನಿರ್ಧಾರ ತಪ್ಪು. ರಾಜನಂದಿನಿ ಬಿಜೆಪಿ ಸೇರುವ ಬಗ್ಗೆ ನನಗೆ ಗೊತ್ತೇ ಇರಲಿಲ್ಲ. ಈ ವಿಚಾರ ಈಗಷ್ಟೇ ಗೊತ್ತಾಯಿತು. ಆಕೆ ಹೀಗೆ ಮಾಡ್ತಾಳೆ ಎಂದುಕೊಂಡಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಗಳು ರಾಜನಂದಿನಿ ಬಿಜೆಪಿ ಸೇರ್ಪಡೆ ಹಿಂದೆ ಶಾಸಕ ಹರತಾಳು ಹಾಲಪ್ಪ ಕೈವಾಡವಿರಬಹುದು. ಮಗಳು ಕಾಂಗ್ರೆಸ್ ಬಿಟ್ಟು ಬಿಜೆಪಿಯತ್ತ ಮುಖ ಮಾಡಿದ್ದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Home add -Advt

ಇದೇ ವೇಳೆ ನೀವೂ ಬಿಜೆಪಿಗೆ ಸೇರ್ಪಡೆಯಾಗ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ, ನಾವು ರಾಜಕೀಯದಲ್ಲಿ ಸ್ಥಿರತೆ, ಬದ್ಧತೆ ಇಟ್ಟುಕೊಂಡು ಬೆಳೆದುಬಂದವರು. ಪಕ್ಷದ ಸಿದ್ಧಾಂತವನ್ನು ಒಪ್ಪಿ ಕೆಲಸ ಮಾಡಿದ ಸಮಾಧಾನ ನನಗಿದೆ. ನಾನು ಯಾಅವ ಕಾರಣಕ್ಕೂ ಕಾಂಗ್ರೆಸ್ ಬಿಡಲ್ಲ, ಬಿಜೆಪಿಗೆ ಸೇರ್ಪಡೆಯಾಗುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

https://pragati.taskdun.com/mlc-r-shankarresignbjp-ticket-miss/

https://pragati.taskdun.com/bjp-ex-mladoddappagiwda-patilresign/

Related Articles

Back to top button