Latest

ಬೇಡಿಕೆ ಈಡೇರಿಸಲು ಆಗ್ರಹಿಸಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರಗೆ ಎನ್ ಪಿಎಸ್ ನೌಕರರ ಮನವಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹಳೆಯ ಪಿಂಚಣಿ ಯೋಜನೆ ಒಪಿಎಸ್ ಜಾರಿಗೆ ತರಲು ಆಗ್ರಹಿಸಿ ಬೆಳಗಾವಿ ಜಿಲ್ಲಾ ಎನ್ ಪಿಎಸ್ ನೌಕರರು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ, ಲಕ್ಷ್ಮಿ ಹೆಬ್ಬಾಳಕರ,  2006 ರ ನಂತರ ಸರಕಾರಿ ಸೇವೆಗೆ ಸೇರಿದ ನೌಕರರ ಸಮಸ್ಯೆಗಳನ್ನು ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಮಂಡಿಸುವುದಾಗಿ ಭರವಸೆ ನೀಡಿದರು.

ಒಪಿಎಸ್ ಮರು ಜಾರಿ ಕುರಿತು ಶಾಸಕರು ಭರವಸೆ ನೀಡಿದ್ದು, ತಮ್ಮ ಸಮಸ್ಯೆಗೆ ಪರಿಹಾರ ಸಿಗುವ ವಿಶ್ವಾಸವನ್ನು ಎನ್ ಪಿಎಸ್ ಬೆಳಗಾವಿ ಜಿಲ್ಲಾ ಅಧ್ಯಕ್ಷ ಎನ್.ಟಿ. ಲೋಕೇಶ್ ಕುಮಾರ ವ್ಯಕ್ತಪಡಿಸಿದರು.

ಇದೇ ವೇಳೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆ ಎನ್ ಪಿಎಸ್ ನೌಕರರ ಹೋರಾಟಕ್ಕೆ ಬೆಂಬಲ ಸೂಚಿಸಿತು.

Home add -Advt

ವಿಶ್ವದ ಮೊದಲ ಟೆಕ್ಸ್ಟ್ ಮೆಸೇಜ್ ಯಾರು, ಯಾರಿಗೆ, ಯಾವಾಗ ಕಳುಹಿಸಿದರು ಗೊತ್ತೇ?

Related Articles

Back to top button