Kannada NewsKarnataka News

1.75 ಕೋಟಿ ರೂ. ವೆಚ್ಚದಲ್ಲಿ ಹುಣಶ್ಯಾಳ ಪಿವಾಯ್ ಗ್ರಾಮದಲ್ಲಿ ಕಾಮಗಾರಿಗೆ ಚಾಲನೆ

ಪ್ರಗತಿವಾಹಿನಿ ಸುದ್ದಿ, ಮೂಡಲಗಿ : ಹುಣಶ್ಯಾಳ ಪಿವಾಯ್ ಹಾಗೂ ಭೈರನಟ್ಟಿ ಗ್ರಾಮಗಳ ರೈತರ ಜಮೀನುಗಳಿಗೆ ಅನುಕೂಲವಾಗಲು ಬ್ರಿಡ್ಜ್-ಕಮ್-ಬ್ಯಾರೇಜ್ ಸಹಕಾರಿಯಾಗಲಿವೆ ಎಂದು ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಶುಕ್ರವಾರ ಸಂಜೆ ಇಲ್ಲಿಗೆ ಸಮೀಪದ ಹುಣಶ್ಯಾಳ ಪಿವಾಯ್ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯ ಅನುದಾನದಡಿ ೧.೭೫ ಕೋಟಿ ರೂ. ವೆಚ್ಚದಲ್ಲಿ ಹಳ್ಳಕ್ಕೆ ನೂತನವಾಗಿ ನಿರ್ಮಿಸಲು ಉದ್ಧೇಶಿಸಿರುವ ಬ್ರಿಡ್ಜ್-ಕಮ್-ಬ್ಯಾರೇಜ್ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಈ ಕಾಮಗಾರಿ ನಿರ್ಮಾಣದಿಂದ ೬೦ ಹೆಕ್ಟರ್ ರೈತರ ಜಮೀನುಗಳಿಗೆ ನೀರಾವರಿ ಪ್ರದೇಶವಾಗಲಿವೆ. ಅಲ್ಲದೇ ಅಂತರ್ಜಲಮಟ್ಟ ಹೆಚ್ಚಳವಾಗಲಿದೆ. ಉತ್ತಮ ಗುಣಮಟ್ಟದಿಂದ ಕಾಮಗಾರಿಯನ್ನು ಕಾಲಮಿತಿಯೊಳಗೆ ಕೈಗೊಂಡು ರೈತ ಸಮುದಾಯಕ್ಕೆ ಅನುಕೂಲ ಮಾಡಿಕೊಡುವಂತೆ ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸೂಚನೆ ನೀಡಿದರು.

ಹುಣಶ್ಯಾಳ ಪಿವಾಯ್ ಗ್ರಾಮದಲ್ಲಿ ಎಲ್ಲ ಮುಖಂಡರು ಒಂದಾಗಿ ಒಗ್ಗಟ್ಟಾಗಿರುವುದರಿಂದ ಅಭಿವೃದ್ಧಿ ಕಾರ್ಯಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತವೆ. ಸರ್ಕಾರದ ವಿವಿಧ ಯೋಜನೆಗಳು ಅನುಷ್ಠಾನಗೊಳ್ಳುತ್ತವೆ. ಗ್ರಾಮದ ಏಳ್ಗೆಗಾಗಿ ಹಲವಾರು ಪ್ರಗತಿಪರ ಯೋಜನೆಗಳನ್ನು ಅನುಷ್ಠಾನ ಮಾಡಿರುವುದಾಗಿ ಅವರು ಹೇಳಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಅಜ್ಜಪ್ಪ ಗಿರಡ್ಡಿ, ಗೋಕಾಕ ಟಿಎಪಿಸಿಎಂಎಸ್ ಅಧ್ಯಕ್ಷ ಅಶೋಕ ನಾಯಿಕ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಎಂ.ಎಂ. ಪಾಟೀಲ, ಪ್ರಭಾಶುಗರ ನಿರ್ದೇಶಕ ಗಿರೀಶ ಹಳ್ಳೂರ, ಈರಣ್ಣಾ ಜಾಲಿಬೇರಿ, ಘಯೋಮನೀಬ ಮಹಾಮಂಡಳ ಅಧ್ಯಕ್ಷ ಅಶೋಕ ಖಂಡ್ರಟ್ಟಿ, ಮುಖಂಡರಾದ ಗೋಪಾಲ ಬಿಳ್ಳೂರ, ಪ್ರಕಾಶ ಪಾಟೀಲ, ಹೊಳೆಬಸು ಕುಂಬಾರ, ಜಂಬೂ ಚಿಕ್ಕೋಡಿ, ಬಸಪ್ಪ ಗಿರಡ್ಡಿ, ಪಾಂಡು ದಡ್ಡಗೋಳ, ಪಾಯಪ್ಪ ಉಪ್ಪೀನ, ಮಾರುತಿ ಮೇತ್ರಿ, ವೆಂಕನಗೌಡ ಪಾಟೀಲ, ರಾಯಪ್ಪ ಬಾನಸಿ, ಬಸು ಖಿಲಾರಿ, ನಾಮದೇವ ಹೊಸಮನಿ, ಸದಾಶಿವ ರೂಗಿ, ಪ್ರಕಾಶ ಸನದಿ, ವೆಂಕಪ್ಪ ಕುರುಬರ, ನಾಗಪ್ಪ ವಾಘಮೋಡಿ, ಸಣ್ಣ ನೀರಾವರಿ ಇಲಾಖೆ ಎಇಇ ಎಸ್.ಎಸ್. ಮೆಳವಂಕಿ, ನ್ಯಾಯವಾದಿ ಮುತ್ತೆಪ್ಪ ಕುಳ್ಳೂರ ಮುಂತಾದವರು ಉಪಸ್ಥಿತರಿದ್ದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button