Kannada NewsKarnataka NewsLatest
*ಡ್ರಗ್ ಪೆಡ್ಲರ್ ಗಳ ಜೊತೆ ನಂಟು: 11 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಸಸ್ಪೆಂಡ್*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನಲ್ಲಿ ಡ್ರಗ್ ಪೆಡ್ಲರ್ ಗಳ ಜೊತೆ ಪೊಲೀಸರೇ ನಂಟು ಹೊಂದಿರುವ ಘಟನೆ ನಡೆದಿದೆ. ಡ್ರಗ್ ಪೆಡ್ಲರ್ ಗಳ ಜೊತೆ ನಂಟು ಹೊಂದಿದ್ದ 11 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಅಮಾನತು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಎರಡು ಠಾಣೆಗಳ ಒಟ್ಟು 11 ಪೊಲೀಸ್ ಅಧಿಕಾರಿ, ಸಿಬ್ಬಂದಿಗಳನ್ನು ಸಸ್ಪೆಂಡ್ ಮಾಡಲಾಗಿದೆ. ರಾಜ್ಯ ಸರ್ಕಾರ ಡ್ರಗ್ ಮುಕ್ತ ಬೆಂಗಳೂರು ಮಾಡಲು ಮುಂದಾಗಿದೆ. ಆದರೆ ಪೊಲೀಸರೇ ಡ್ರಗ್ ಪೆಡ್ಲರ್ ಗಳ ಜೊತೆ ನಂಟು ಹೊಂದಿದ್ದಾರೆ. ಡ್ರಗ್ ಮಾರಾಟ ಮಾಡಲು ಪೊಲೀಸರೇ ಪೆಡ್ಲರ್ ಗಳಿಗೆ ಶ್ರೀರಕ್ಷೆಯಾಗಿದ್ದಾರೆ.
ತಿಂಗಳಿಗೆ 1.5 ಲಕ್ಷದಿಂದ 2 ಲಕ್ಷದವರೆಗೆ ಮಾಮೂಲಿ ಪಡೆಯುತ್ತಿದ್ದರು. ಚಾಮರಾಜಪೇಟೆ ಪೊಲೀಸ್ ಇನ್ಸ್ ಪೆಕ್ಟರ್ ಟಿ.ಮಂಜಣ್ಣ, ಹೆಡ್ ಕಾನ್ಸ್ ಟೇಬಲ್ ಗಳಾದ ರಮೇಶ್, ಶಿವರಾಜ್, ಪಿಸಿ ಮಧುಸೂದನ್, ಪ್ರಸನ್ನ, ಶಂಕರ್ ಬೆಳಗಲಿ, ಆನಂದ್ ಹಾಗೂ ಜೆ.ಜೆ ನಗರ ಠಾಣೆಯ ಎ ಎಸ್ ಐ ಕುಮಾರ್, ಹೆಡ್ ಕಾನ್ಸ್ ಟೇಬಲ್ ಆನಂದ್, ಸಿಬ್ಬಂದಿ ಬಸವನಗೌಡ ಸೇರಿ 11 ಜನರನ್ನು ಸಸ್ಪೆಂಡ್ ಮಾಡಲಾಗಿದೆ.