ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಗಾಂಜಾ ಪ್ರಕರಣ ಸಂಬಂಧ ಮಂಗಳೂರಿನ ಮೆಡಿಕಲ್ ಕಾಲೇಜಿನ ಮೇಲೆ ಪೊಲಿಸರು ದಾಳಿ ಮುಂದುವರೆಸಿದ್ದಾರೆ.
ಮತ್ತೋರ್ವ ಕೆಎಂಸಿ ವೈದ್ಯಕೀಯ ವಿದ್ಯಾರ್ಥಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಡಾ.ವಿ.ಎಸ್.ಹರ್ಷಕುಮಾರ್ ಬಂಧಿತ ಆರೊಪಿ ಎಂದು ತಿಳಿದುಬಂದಿದೆ.
ತುಮಕೂರು ಮೂಲದ ವಿ.ಎಸ್.ಹರ್ಷಕುಮಾರ್, ಮಂಗಳೂರಿನ ಕೆಎಂಸಿ ಮೆಡಿಕಲ್ ಕಾಲೇಜಿನಲ್ಲಿ ಅಂತಿಮ ವರ್ಷದ ವೈದ್ಯ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದ.
ನಿನ್ನೆ ನಡೆಸಿದ್ದ ದಾಳಿಯಲ್ಲಿ ಮಂಗಳೂರು ಪೊಲೀಸರು ಕೆಎಂಸಿ, ಯೆನಪೋಯಾ ಮೆಡಿಕಲ್ ಕಾಲೇಜು ಸೇರಿದಂತೆ ಪ್ರತಿಷ್ಠತ ಮೆಡಿಕಲ್ ಕಾಲೇಜುಗಳ ಇಬ್ಬರು ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಸೇರಿ 10 ಜನರನ್ನು ಬಂಧಿಸಿದ್ದರು. ಇಂದೂ ಕೂಡ ದಾಳಿ ಮುಮ್ದುವರೆಸಿರುವ ಪೊಲೀಸರು ಮಂಗಳೂರು, ಕರಾವಳಿ ಭಾಗದಲ್ಲಿನ ಕಾಲೇಜುಗಳ ಮೇಲೂ ದಾಳಿ ನಡೆಸಿ ಗಾಂಜಾ, ಮಾದಕವಸ್ತುಗಳ ನಶೆಯಲ್ಲಿ ತೇಲುತ್ತಿರುವ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದಾರೆ.
*ರೈಲ್ವೆ ಸ್ಟೇಷನ್ ನಲ್ಲೇ ಹೃದಯಾಘಾತ: ಯಾದಗಿರಿ ಹಿರೇಮಠದ ವೀರಮಹಾಂತ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯ*
https://pragati.taskdun.com/bangalore-railway-stationveeramahanta-shivacharya-swamijideathheart-attack/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ