Kannada NewsKarnataka NewsLatest

ನಕಲಿ ದಾಖಲೆ; ವಿಟಿಯುದಿಂದ 51 ವಿದ್ಯಾರ್ಥಿಗಳ ಪ್ರವೇಶ ರದ್ದು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಎಂಜಿನಿಯರಿಂಗ್ ಕೋರ್ಸ್‌ಗೆ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (NIOS)ನ ನಕಲಿ ಪ್ರಮಾಣಪತ್ರಗಳನ್ನು ನೀಡಿದ ಹಿನ್ನೆಲೆಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ 51 ವಿದ್ಯಾರ್ಥಿಗಳ ಪ್ರವೇಶ ರದ್ದುಗೊಳಿಸಿದೆ.

ವಿಟಿಯು ಅಧಿಕಾರಿಗಳ ಪ್ರಕಾರ, ದಾಖಲೆಗಳ ಪರಿಶೀಲನೆ ಪ್ರಕ್ರಿಯೆ ವೇಳೆ NIOS ನೀಡಿದ 12 ನೇ ತರಗತಿಯ ಅಂಕಪಟ್ಟಿಗಳನ್ನು QR ಕೋಡ್ ಮೂಲಕ ಸ್ಕ್ಯಾನ್ ಮಾಡಿದಾಗ, ವಿದ್ಯಾರ್ಥಿಗಳು ಎನ್​ಐಒಎಸ್​​​ನ ನಕಲಿ ವೆಬ್‌ಸೈಟ್‌ ಮೂಲಕ ಅಂಕಪಟ್ಟಿ ಪಡೆದಿದ್ದಾರೆ. ವಿದ್ಯಾರ್ಥಿಗಳು ಮ್ಯಾನೇಜ್‌ಮೆಂಟ್ ಕೋಟಾದಡಿ ಸೀಟುಗಳನ್ನು ಪಡೆದಿದ್ದು, ಅವರಲ್ಲಿ ಹೆಚ್ಚಿನವರು ತುಮಕೂರು ಮತ್ತು ಚಿಕ್ಕಬಳ್ಳಾಪುರದಲ್ಲಿ ಬೆಂಗಳೂರಿನ ಉನ್ನತ ಕಾಲೇಜುಗಳಿಗೆ ಪ್ರವೇಶ ಪಡೆದಿದ್ದರು ಎನ್ನಲಾಗಿದೆ.

ಪ್ರವೇಶ ಅನುಮೋದನೆ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರದ ತಾಂತ್ರಿಕ ಶಿಕ್ಷಣ ಇಲಾಖೆ ಈ ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮೋದನೆ ನೀಡಿತ್ತು. ಆದರೆ ವಿಟಿಯು ವಿದ್ಯಾರ್ಥಿಗಳಿಗೆ ಕಾಲೇಜುವಾರು ಅನುಮೋದನೆ ನೀಡುವಾಗ ನಕಲಿ ಪ್ರಮಾಣ ಪತ್ರಗಳು ನಕಲಿ ಎಂಬುದನ್ನು ಗುರುತಿಸಿದೆ. ಕಳೆದ ಐದು ವರ್ಷಗಳಲ್ಲಿ NIOS ಪ್ರಮಾಣಪತ್ರಗಳ ಆಧಾರದ ಮೇಲೆ ವಿಟಿಯು ಅನೇಕ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತಿದೆ. ಇಂಥ ದಾಖಲೆಗಳ ಮರುಪರಿಶೀಲಿಲನೆಗೆ ವಿಟಿಯು ಮುಂದಾಗಿದೆ. ಈ ವಿಚಾರವನ್ನು NIOS ಗಮನಕ್ಕೂ ತರಲು ವಿಟಿಯು ನಿರ್ಧರಿಸಿದೆ.

ಹೀಗೆ ನಕಲಿ ದಾಖಲೆಗಳನ್ನು ನೀಡುವ ದೊಡ್ಡ ಜಾಲವೇ ಇರುವ ಶಂಕೆಯಿದ್ದು ಹಿಂದಿನ ದಾಖಲಾತಿಗಳ ಬಗ್ಗೆಯೂ ಪರಿಶೀಲನೆ ನಡೆಸುವುದಾಗಿ ವಿಟಿಯು ಉಪಕುಲಪತಿ ಎಸ್. ವಿದ್ಯಾಶಂಕರ್ ತಿಳಿಸಿದ್ದಾರೆ.

https://pragati.taskdun.com/siddaramaiah-is-the-reason-why-we-quit-congress-dr-k-sudhakara/
https://pragati.taskdun.com/powerful-leaders-of-belgaum-who-will-get-a-place-in-the-cabinet/
https://pragati.taskdun.com/yaduveera-wodeyar-meets-hukkeri-hiremath-swamiji/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button