ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಿಐಡಿ ಡಿವೈಎಸ್ ಪಿ ಲಕ್ಷ್ಮಿ ಆತ್ಮಹತ್ಯೆ ಪ್ರಕರಣದ ಹಿಂದೆ ಹಲವು ಅನುಮಾನಗಳು ಆರಂಭವಾಗಿವೆ. ಆದರೆ ಅತಿಯಾದ ಖಿನ್ನತೆಯೇ ಅವರ ಆತ್ಮಹತ್ಯೆಗೆ ಕಾರಣ ಎಂಬ ಮಾತು ಕೇಳಿಬರುತ್ತಿದೆ. ಖಿನ್ನತೆಯಿಂದ ಹೊರಬರಲು ವೈದ್ಯರ ಬಳಿ ಕೌನ್ಸೆಲಿಂಗ್ ಕೂಡ ಪಡೆದುಕೊಳ್ಳುತ್ತಿದ್ದರು ಎನ್ನಲಾಗಿದೆ.
ಮಕ್ಕಳಿಲ್ಲ ಎಂಬ ಕೊರಗಿನಿಂದ ಹಾಗೂ ಪತಿ ಪತ್ನಿಯ ನಡುವೆ ಸ್ವಲ್ಪ ಮನಸ್ತಾಪವೂ ಇತ್ತು ಎನ್ನಲಾಗಿದೆ. ಇದರಿಂದಾಗಿ ಅತಿಯಾದ ಖಿನ್ನತೆಗೆ ಒಳಗಾಗಿದ್ದ ಡಿವೈ ಎಸ್ ಪಿ ಲಕ್ಷ್ಮಿ ಮದ್ಯ ಸೇವನೆ ಆರಂಭಿಸಿದ್ದರು. ಈ ಹಿಂದೆ ಕೂಡ ಎರಡು ಬಾರಿ ಲಕ್ಷ್ಮಿ ಆತ್ಮಹತ್ಯೆಗೆ ಯತ್ನಿಸಿದ್ದರು. ಖಿನ್ನತೆಗೆ ವೈದ್ಯರ ಬಳಿ ಕೌನ್ಸೆಲಿಂಗ್ ಪಡೆಯುತ್ತಿದ್ದ ಲಕ್ಷ್ಮಿ ಅವರಿಗೆ ಮದ್ಯ ಸೇವಿಸಬಾರದು ಎಂದು ವೈದ್ಯರು ಸೂಚಿಸಿದ್ದರು. ಆದರೂ ಮಾನಸಿಕ ಒತ್ತಡ ಮರೆಯಲು ರೆಗ್ಯೂಲರ್ ಆಗಿ ಸ್ನೇಹಿತರ ಜೊತೆ ಪಾರ್ಟಿಯಲ್ಲಿ ಭಾಗಿಯಾಗುತ್ತಿದ್ದರು ಎನ್ನಲಾಗಿದೆ.
ಅತಿಯಾದ ಖಿನ್ನತೆಯಿಂದಲೇ ಈಗ ಲಕ್ಷ್ಮಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ಡಿವೈ ಎಸ್ ಪಿ ಲಕ್ಷ್ಮಿ ಎರಡು ತಿಂಗಳ ಹಿಂದೆ ಸಿಐಡಿಗೆ ಜಾಯಿನ್ ಆಗಿದ್ದರು. ಅವರ ತಂದೆ ಕೂಡ ಕೆಎಎಸ್ ಅಧಿಕಾರಿ ಹಾಗೂ ಪತಿಯ ತಂದೆ ಕೂಡ ಬ್ಯಾಂಕ್ ಮ್ಯಾನೇಜರ್ ಆಗಿದ್ದರು. ಎಷ್ಟೇ ಸೌಲಭ್ಯ, ದೊಡ್ಡ ಹುದ್ದೆಯಲ್ಲಿದ್ದರೂ ಕೂಡ ಖಿನ್ನತೆ ಎಂಬುದು ಯಾರನ್ನುಬೇಕಾದರೂ ಕಾಡುತ್ತೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿ. ಒಟ್ಟಾರೆ ತನಿಖೆಯಿಂದಷ್ಟೇ ಸತ್ಯಾಸತ್ಯತೆ ಹೊರಬರಬೇಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ