ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಕೋವಿಡ್ 19 ನಿರ್ವಹಣೆಯಲ್ಲಿ ತಂತ್ರಜ್ಞಾನ ಬಳಕೆಗಾಗಿ ಕರ್ನಾಟಕ ರಾಜ್ಯ ಕೋವಿಡ್ -19 ವಾರ್ ರೂಂ ಗೆ ಕೇಂದ್ರ ಸರಕಾರದ ಇ ಆಡಳಿತದ 2020 -21ನೇ ಪ್ರಶಸ್ತಿ ಲಭಿಸಿದೆ.
ತೆಲಂಗಾಣ ಜನೆವರಿ 7 ಮತ್ತು 8ರಂದು ನಡೆದ ಸಮ್ಮೇಳನದಲ್ಲಿ ಕರ್ನಾಟಕ ಕೋವಿಡ್ ವಾರ್ ರೂಮ್ ಮುಖ್ಯಸ್ಥ ಮುನೀಶ್ ಮೌದ್ಗಿಲ್ ಮತ್ತು ತಂಡವು ಪ್ರಶಸ್ತಿಯನ್ನು ಸ್ವೀಕರಿಸಿತು. ಕೇಂದ್ರ ಸಚಿವ ಡಾ ಜಿತೇಂದ್ರ ಸಿಂಗ್ ಅವರು ಪ್ರಶಸ್ತಿಯನ್ನು ನೀಡಿದರು.
ಕೋವಿಡ್ ನಿರ್ವಹಣೆಯಲ್ಲಿ ತಂತ್ರಜ್ಞಾನ, ಡಿಜಿಟಲೀಕರಣವನ್ನು ಬಳಸುವುದಕ್ಕಾಗಿ ಭಾರತ ಸರ್ಕಾರದ ಇ-ಆಡಳಿತ ಪ್ರಶಸ್ತಿಯನ್ನು ನೀಡಲಾಗುತ್ತದೆ. ಡಿಜಿಟಲ್ ಕರ್ನಾಟಕಕ್ಕೆ ಮತ್ತೊಂದು ಪ್ರಶಸ್ತಿಯ ಗರಿಮೆ ಬಂದಂತಾಗಿದೆ.
ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ