Latest

ಟೀಚರ್ ಆದ ರೋಬೋಟ್ ; ಈಗಲ್ ರೋಬೋ ಹೊಸ ಪ್ರಯೋಗ

ಪ್ರಗತಿವಾಹಿನಿ; ಬೆಂಗಳೂರು: ದೇಶ ಈಗ ಯಂತ್ರಮಯವಾಗಿದೆ. ಹಲವಾರು ಚಿತ್ರಗಳಲ್ಲಿ ರೋಬೊ ನೇ ಎಲ್ಲ ಕೆಲಸ ಮಾಡುವುದನ್ನ ನಾವು ನೋಡುತ್ತೇವೆ. ಈಗ ಬೆಂಗಳೂರಿನಲ್ಲಿ ರೋಬೊ ಮಕ್ಕಳಿಗೆ ಪಾಠ ಮಾಡಿದೆ, ಟೀಚರ್ ಆಗಿದೆ.

ಕಲಿಕೆಯನ್ನು ಸುಲಭವಾಗಿಸುವಂತಹ `ಈಗಲ್’ ರೋಬೋ (Eagle Robo) ಪರೀಕ್ಷಾರ್ಥ ಪ್ರಾತ್ಯಕ್ಷಿಕೆಯು ಬೆಂಗಳೂರಿನ ಮಲ್ಲೇಶ್ವರಂನ 13ನೇ ಅಡ್ಡರಸ್ತೆಯಲ್ಲಿರುವ ಬಾಲಕಿಯರ ಸರಕಾರಿ ಪ್ರೌಢಶಾಲೆಯಲ್ಲಿ ಮಾಡಲಾಗಿತ್ತು. ರೋಬೊಗೆ ಹಲವು ಪ್ರಶ್ನೆಗಳನ್ನು ಕೇಳಲಾಯಿತು  ಹಾಗೆಯೇ, ಅದು ನೀಡಿದ ಉತ್ತರ ಮತ್ತು ನೆರವನ್ನು ಕಂಡು ವಿಧ್ಯಾರ್ಥಿಗಳು ಅಲ್ಲಿ ನೆರೆದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಬೆರಗಾದರು. ಈಗಲ್’ ರೋಬೋವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ತೋರಿಸಲಾಗುವುದು.

21ನೇ ಶತಮಾನವು ತಂತ್ರಜ್ಞಾನದ ಯುಗವಾಗಿದ್ದು, ಬೋಧನೆಯಲ್ಲಿ ಇದರ ಅಳವಡಿಕೆ ಅಗತ್ಯವಾಗಿದೆ‌. ರೋಬೊ‌ ಶಿಕ್ಷಕರಿಗೆ ಪರ್ಯಾಯ ಅಲ್ಲ. ಆದರೆ ಶಿಕ್ಷಕರಿಗೆ ಬೋಧನೆಯಲ್ಲಿ ಸಹಕರಿಸುವ ಕೆಲಸ ಮಾಡಲಿದೆ. ಇದರಿಂದ ವಿದ್ಯಾರ್ಥಿಗಳ ಕಲಿಕೆಯ ಮಟ್ಟ ಕೂಡ ಹೆಚ್ಚಾಗಲಿದೆ. ಗುಣಮಟ್ಟದ ಬೋಧನೆಯ ಸಲುವಾಗಿ, ಇಂತಹ ರೋಬೋ ಗಳು ಇದ್ದರೆ ಒಳ್ಳೆಯದು’ ಎಂದು ಡಾ.ಸಿ.ಎನ್. ಅಶ್ವತ್ಥನಾರಾಯಣ  ಅಭಿಪ್ರಾಯಪಟ್ಟರು.

6ನೇ ತರಗತಿವರೆಗಷ್ಟೇ ವಿದ್ಯಾರ್ಥಿನಿಯರಿಗೆ ಅವಕಾಶ; ಶಾಕ್ ನೀಡಿದ ತಾಲಿಬಾನ್ ಸರ್ಕಾರ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button