
ಪ್ರಗತಿವಾಹಿನಿ ಸುದ್ದಿ; ಚಿತ್ತಗಾಂವ್: ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಮುಂಜಾನೆ 6.1 ತೀವ್ರತೆಯ ಪ್ರಬಲ ಭೂಕಂಪ ವರದಿಯಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
ಬಾಂಗ್ಲಾದೇಶದ ಚಿತ್ತಗಾಂಗ್ ನಿಂದ 175 ಕೀ.ಮೀ ಪೂರ್ವಕ್ಕೆ ಅಪ್ಪಳಿಸಿದೆ. ತ್ರಿಪುರಾ, ಮಣಿಪುರ, ಮಿಜೋರಾಂ ಮತ್ತು ಅಸ್ಸಂನಲ್ಲಿಯೂ ಕಂಪನದ ಅನುಭವವಾಗಿದೆ.
ಇದು ನಾನು ಅನುಭವಿಸಿದ ಅತಿ ದೀರ್ಘಾವದಿಯ ಭೂಕಂಪಗಳಲ್ಲಿ ಒಂದಾಗಿದೆ ಎಂದು ಮಿಜೋರಾಂನ ಥೆನ್ಜಾಲ್ ನ ಪ್ರತ್ಯಕ್ಷದರ್ಶಿಯೊಬ್ಬ ಮಾಹಿತಿ ನೀಡಿದ್ದನ್ನು ಇಎಂಎಸ್ ಸಿಯಲ್ಲಿ ಪೋಸ್ಟ್ ಮಾಡಲಾಗಿದೆ. ಕೋಲ್ಕತ್ತಾ ಹಾಗೂ ಗುವಾಹಟಿಯಲ್ಲಿ ಭೂಕಂಪನದ ಸುಮಾರು 30 ಸೆಕೆಂಡುಗಳಷ್ಟು ದೀರ್ಘವಾಗಿತ್ತು. ಭೂಕಂಪನದ ಕೇಂದ್ರ ಬಿಂದು ಈಶಾನ್ಯ ಭಾರತದ ಐಜ್ವಾಲ್ ನಿಂದ ಆಗ್ನೇಯಕ್ಕೆ 126 ಕಿ.ಮೀ ದೂರದಲ್ಲಿದೆ ಎಂದು ತಿಳಿದುಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ