Kannada NewsKarnataka NewsLatest

25 ಲಕ್ಷ ಪಂಚಮಸಾಲಿಗಳಿಂದ ವಿಧಾನಸೌಧ ಮುತ್ತಿಗೆಗೆ ಮುಹೂರ್ತ ಫಿಕ್ಸ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡಬೇಕೆನ್ನುವ ಹೋರಾಟ ಕುತೂಹಲ ಘಟ್ಟ ತಲುಪಿದ್ದು, ಡಿಸೆಂಬರ್ 12ರಂದು ವಿಧಾನಸೌಧ ಮುತ್ತಿಗೆ ಹಾಕಲಿದ್ದಾರೆ.

 ಕೂಡಲಸಂಗಮ ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹುಕ್ಕೇರಿಯಲ್ಲಿ ಶುಕ್ರವಾರ ನಡೆದ ಸಮಾವೇಶದಲ್ಲಿ ಈ ವಿಷಯ ಪ್ರಕಟಿಸಿದ್ದು, 25 ಲಕ್ಷ ಜನರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

2ಎ ಮೀಸಲಾತಿ ಹೋರಾಟ ಕೆಲವೇ ದಿನಗಳಲ್ಲಿ ತಾರ್ಕಿಕ ಅಂತ್ಯ ಕಾಣಲಿದೆ. ಲಿಂಗಾಯತರಲ್ಲಿ ಶೇ 82ರಷ್ಟು ಬಹುಸಂಖ್ಯಾತರು ಪಂಚಮಸಾಲಿ ಸಮಾಜದವರು. ಆದರೆ ನಾವು ಅಧಿಕಾರದಿಂದ ವಂಚಿತರಾಗಿದ್ದಾರೆ. ಹೃದಯವಂತ ಸಮಾಜ ನಮ್ಮದು. ನಾನು ಪೀಠಾಧ್ಯಕ್ಷನಾದ ಬಳಿಕ ಎಂದೆಂದಿಗೂ ಯಾರನ್ನೂ ಏನನ್ನೂ ಕೇಳಿಲ್ಲ. ಮೀಸಲಾತಿ ಸಿಗೋವರೆಗೂ ಏನೂ ಬೇಡ, ಹೋರಾಟಕ್ಕೆ ಬನ್ನಿ ಎಂದು ಕರೆ ಕೊಟ್ಟಿದ್ದೇನೆ ಎಂದು ತಿಳಿಸಿದರು.

2ಎ ಮೀಸಲಾತಿಗೆ ಆಗ್ರಹಿಸಿ ಸರ್ಕಾರಕ್ಕೆ ಕೊಟ್ಟ ಗಡುವು ಮುಗಿದು ಹೋಗಿದೆ. ಸರ್ಕಾರ ನಾಲ್ಕು ಬಾರಿ ಮಾತು ಕೊಟ್ಟು ಮರಿದುಕೊಂಡಿದೆ. ಹೀಗಾಗಿ, ಸಿಎಂ ಮನೆ ಮುಂದೆ ಪ್ರತಿಭಟನೆ ಮಾಡಿದ್ದೇವೆ. ಎಸ್​ಸಿ ಎಸ್​ಟಿ ಸಮಾಜಕ್ಕೆ ಮೀಸಲಾತಿ ಕೊಟ್ಟಂತೆ ನಮಗೂ ಮೀಸಲಾತಿ ಕೊಡಬೇಕು. ಚುನಾವಣೆ ಬರುವ ಮುಂಚೆ ಮೀಸಲಾತಿ ಘೋಷಣೆ ಮಾಡಬೇಕು. ಮುಖ್ಯಮಂತ್ರಿಗಳಿಗೆ ಕಳಕಳಿ ಇದ್ದರೆ ಮೀಸಲಾತಿಯನ್ನು ಕೂಡಲೇ ಘೋಷಿಸಲಿ ಎಂದು ಸವಾಲು ಹಾಕಿದರು.

Home add -Advt
ಸಮಾವೇಶದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್  ಮಾತನಾಡಿ,  ಸೂರ್ಯ ಮುಳುಗದ ಸಾಮ್ರಾಜ್ಯವನ್ನು ಹುಟ್ಟುಡಗಿಸಿದ ಚನ್ನಮನ್ನ ವಂಶಸ್ತರು ನಾವು. ನನ್ನ ಮತಕ್ಷೇತ್ರದಲ್ಲಿ ೫ ರಿಂದ ೬ ಸಾವಿರ ಜನ ನನ್ನ ಪಂಚಮಸಾಲಿ ಜನ ಇರಬಹುದು. ಆದರೆ ಪಂಚಮಸಾಲಿ ಮಗಳಿಗೆ ನಮ್ಮ ಸಮಾಜವನ್ನೂ ಜತೆಗೆ ಕರೆದುಕೊಂಡು ಹೋಗು ಅಂತ ಜನ ಆಶೀರ್ವಾದ ಮಾಡಿದ್ದಾರೆ ಎಂದರು.
ವೇದಿಕೆಯ ಮೇಲಿದ್ದ ಶಾಸಕ ಅರವಿಂದ ಬೆಲ್ಲದ್ ಅವರನ್ನು ಉದ್ದೇಶಿಸಿ, ಕೇಂದ್ರದಲ್ಲಿ ನಿಮ್ಮದೆ ಸರ್ಕಾರ ಇದೆ ರಾಜ್ಯದಲ್ಲೂ ನಿಮ್ಮದೆ ಸರ್ಕಾರ ಇದೆ. ನಮಗೆ ೨ ಎ ಮೀಸಲಾತಿ ನೀಡಲು ಸಹಕರಿಸಿ.  
ಘೋಷಣೆ ಮಾಡಿ ಕ್ಯಾಬಿನೇಟ್ ನಿರ್ಧಾರ ಆದಮೇಲೆ, ರಾಜ್ಯಪಾಲರ ಬಳಿ ಹೋಗಿ ಅಂಗೀಕಾರ ಆಗಿ ಅದು ಶಾಸನವಾಗಬೇಕು. ರಾಷ್ಟ್ರಪತಿಗಳ ಅಂಕಿತವಾದ ಮೇಲೆ ನಮಗೆ ೨ ಎ ಸಿಗುತ್ತದೆ. ಅಲ್ಲಿಯವರೆಗೂ ಬೆನ್ನುಬಿದ್ದು ಮಾಡಿಸಿ ಎಂದು  ಹೇಳಿದರು.
ಮಾಜಿ ಸಚಿವರಾದ ಎ.ಬಿ.ಪಾಟೀಲ, ಶಶಿಕಾಂತ ನಾಯಿಕ, ಬಸನಗೌಡ ಪಾಟೀಲ, ವಿನಯ ಕುಲಕರ್ಣಿ, ವಿಜಯಾನಂದ ಕಾಶಪ್ಪನವರ್,  ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಗೊಳಿ, ಬಿಜೆಪಿ ಚಿಕ್ಕೋಡಿ ಜಿಲ್ಲಾಧ್ಯಕ್ಷ ಡಾ.ರಾಜೇಶ ನೇರ್ಲಿ ಸೇರಿದಂತೆ ಹಲವಾರು ಮುಖಂಡರು ಮಾತನಾಡಿದರು.
https://pragati.taskdun.com/latest/jaya-mruthyunjaya-svamijiwarnedstate-govt/

Related Articles

Back to top button