Uncategorized

ವೋಟರ್ ಲಿಸ್ಟ್ ನಲ್ಲಿ ಹೆಸರು ಹುಡುಕುವ ಸುಲಭ ವಿಧಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬುಧವಾರ ಕರ್ನಾಟಕ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ.

ಆದರೆ ಬಹಳಷ್ಟು ಜನರಿಗೆ ತಮ್ಮ ಹೆಸರು ಯಾವ ಮತಗಟ್ಟೆಯಲ್ಲಿದೆ ಎನ್ನುವ ಮಾಹಿತಿ ಇಲ್ಲ. ಅದನ್ನು ಹೇಗೆ ಪತ್ತೆ ಹಚ್ಚವುದು ಎನ್ನುವುದೂ ತಿಳಿಯುತ್ತಿಲ್ಲ. ಈ ಕುರಿತು ಅನೇಕರು ಪ್ರಗತಿವಾಹಿನಿಗೆ ಕರೆ ಮಾಡಿ ವೋಟರ್ ಲಿಸ್ಟ್ ನಲ್ಲಿ ಹೆಸರು, ಮತಗಟ್ಟೆ ಚೆಕ್ ಮಾಡುವ ಸುಲಭ ವಿಧಾನ ತಿಳಿಸುವಂತೆ ಕೋರುತ್ತಿದ್ದಾರೆ.

ಇಲ್ಲಿದೆ 2 ವಿಧಾನ

ಮೊದಲನೆಯದಾಗಿ, ವೋಟರ್ ಹೆಲ್ಪ್ ಲೈನ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳುವ ಮೂಲಕ ನಿಮ್ಮ ಹೆಸರು, ಮತಗಟ್ಟೆ ವಿವರಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು.

ಮೊದಲು ಪ್ಲೇ ಸ್ಟೋರ್ ಗೆ ಹೋಗಿ VOTER HELPLINE ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ. ಕೆಳಗಡೆ I Agree ಎಂದಿರುವಲ್ಲಿ ಟಿಕ್ ಮಾಡಿ, ನಂತರ ನಿಮ್ಮ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಿ. ಆಗ Search your name in Electoral ಎಂದು ಬರುತ್ತದೆ. ಅಲ್ಲಿ ಕ್ಲಿಕ್ ಮಾಡಿ ತಕ್ಷಣ 4 ಆಯ್ಕೆಗಳು ಕಾಣಿಸಿಕೊಳ್ಳುತ್ತವೆ. ಬಾರ್ಕೋಡ್ ಮೂಲಕ, ಕ್ಯೂ ಆರ್ ಕೋಡ್ ಮೂಲಕ, ವಿವರಗಳ ಮೂಲಕ ಮತ್ತು ಎಪಿಕ್ ಸಂಖ್ಯೆಯ ಮೂಲಕ ನೀವು ನಿಮ್ಮ ವಿವರವನ್ನು ಹುಡುಕಬಹುದು. ಇದು ಅತ್ಯಂತ ಸುಲಭ ವಿಧಾನ.

ಇನ್ನೊಂದು ವಿಧಾನ, *ELECTION COMMISSION OF KARNATAKA* ದ ಲಿಂಕ್ ನಲ್ಲಿ ಎಲ್ಲಾ ಜಿಲ್ಲೆಯ, ಎಲ್ಲಾ ತಾಲೂಕಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಮತದಾರರ ಲಿಸ್ಟ್ ಅನ್ನು ನೋಡಬಹುದು.

ಇಲ್ಲಿದೆ ಲಿಂಕ್ – ಇದರಲ್ಲಿ ರಾಜ್ಯ, ಜಿಲ್ಲೆ, ಕ್ಷೇತ್ರ ಆಯ್ಕೆ ಮಾಡಿಕೊಂಡು ನಿಮ್ಮ ಹತ್ತಿರದ ಮತಗಟ್ಟೆ ಆಯ್ದು ನಿಮ್ಮ ಹೆಸರನ್ನು ಹುಡುಕಬೇಕು.

ಲಿಂಕ್ : https://ceo.karnataka.gov.in/FinalRoll_2023/

ಇದು ಮೊದಲಿನ ವಿಧಾನದಷ್ಟು ಸುಲಭವಲ್ಲ. ಮತಗಟ್ಟೆಗಳ ಸಾವಿರಾರು ಸಂಖ್ಯೆಯ ಹೆಸರುಗಳನ್ನು ಹುಡುಕಬೇಕಾಗುತ್ತದೆ.

ಈ ಲಿಂಕ್ ಎಲ್ಲರಿಗೂ ಶೇರ್ ಮಾಡಿ, ಹೆಸರು ಹುಡುಕಲು ಸಹಾಯ ಮಾಡಿ.

ಎಲ್ಲರೂ ತಪ್ಪದೆ ಮತ ಚಲಾಯಿಸಿ. ಶುಭವಾಗಲಿ.

https://pragati.taskdun.com/karnatakaheavy-rain5-daysimdalert/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button