*ಎಜು ಟೆಕ್ ಸಮಿಟ್ -2025: 5 ಪ್ರಶಸ್ತಿ ಮುಡಿಗೇರಿಸಿಕೊಂಡ ವಿಶ್ವೇಶ್ವರಯ್ಯ ತಾoತ್ರಿಕ ಮಹಾವಿದ್ಯಾಲಯ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯ ವಿಶ್ವೇಶ್ವರಯ್ಯ ತಾoತ್ರಿಕ ಮಹಾವಿದ್ಯಾಲಯ ಎಕನಾಮಿಕ್ ಟೈಮ್ಸ್ ಎಜು ಟೆಕ್ ಸಮಿಟ್ -2025ರಲ್ಲಿ 5 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.
ಸತತ ಎರಡನೇ ಬಾರಿಗೆ ವಿಶ್ವೇಶ್ವರಯ್ಯ ತಾoತ್ರಿಕ ಮಹಾವಿದ್ಯಾಲಯ ಪ್ರತಿಷ್ಠಿತ ಎಕನಾಮಿಕ್ ಟೈಮ್ಸ್ ಎಡು ಟೆಕ್ ಸಮಿಟ್ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
ಬೆಳಗಾವಿಯ ವಿಶ್ವೇಶ್ವರಯ್ಯ ತಾoತ್ರಿಕ ಮಹಾವಿದ್ಯಾಲಯ(ವಿ ತಾ ವಿ), ತಂತ್ರಜ್ಞಾನ ದೂರದೃಷ್ಟಿಯುಳ್ಳ ಅತ್ಯುತ್ತಮ ಕುಲಪತಿ ಪ್ರಶಸ್ತಿಯನ್ನು ಒಳಗೊಂಡ ಐದು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಇತ್ತೀಚಿಗೆ ಮುಂಬೈನ ಸಹರಾ ಸ್ಟಾರ್ ಹೋಟೆಲ್ ನಲ್ಲಿ ನಡೆದ 2025ರ ಎಕನಾಮಿಕ್ ಟೈಮ್ಸ್ ತಾಂತ್ರಿಕ ಶಿಕ್ಷಣ ಸಮಿಟ್ ನಲ್ಲಿ ಈ ಕೆಳಗಿನ ವಿಭಾಗಗಳಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದೆ.
- ತಂತ್ರಜ್ಞಾನ ದೂರದೃಷ್ಟಿಯುಳ್ಳ ಅತ್ಯುತ್ತಮ ಕುಲಪತಿ,
- ರಾಷ್ಟ್ರೀಯ ಶಿಕ್ಷಣದ ನೀತಿಯ ಪರಿಣಾಮಕಾರಿ ಅಳವಡಿಕೆ,
- ತಂತ್ರಜ್ಞಾನ ಆಧಾರಿತ ಕೈಗಾರಿಕಾ ಶೈಕ್ಷಣಿಕ ಸಹಭಾಗಿತ್ವ,
- ಡಿಜಿಟಲ್ ಗ್ರಂಥಾಲಯ ಸೌಲಭ್ಯಗಳ ಅನುಷ್ಠಾನ
- ತಂತ್ರಜ್ಞಾನ ಅವಲಂಬಿತ ಎಂಜಿನಿಯರಿಂಗ್ ವಿಶ್ವವಿದ್ಯಾಲಯ
ಈ ಪ್ರತಿಷ್ಠಿತ ಸಮ್ಮಿಟ್ ನಲ್ಲಿ ಭಾರತದ ಹಲವಾರು ಖಾಸಗಿ ಹಾಗೂ ಸಾರ್ವಜನಿಕ ವಿಶ್ವವಿದ್ಯಾಲಯಗಳು ಪಾಲ್ಗೊಂಡಿದ್ದವು. ವಿಶ್ವೇಶ್ವರಯ್ಯ ತಾoತ್ರಿಕ ಮಹಾವಿದ್ಯಾಲಯದ ಈ 26 ವರ್ಷಗಳಲ್ಲಿ ಇದೊಂದು ಅಸಾದಾರಣ ಸಾಧನೆಯಾಗಿದೆ.
ಇದು ಇತ್ತೀಚಿಗೆ ವಿವಿಯಲ್ಲಿಯಾದ ಆಮೂಲಾಗ್ರ ಧನಾತ್ಮಕ ಬದಲಾವಣೆ, ವಿದ್ಯಾರ್ಥಿ ಕೇಂದ್ರಿತ ಸುವ್ಯವಸ್ಥೆ, ಕೌಶಲ್ಯ ಆಧಾರಿತ ಔದ್ಯೋಗಿಕ ಬೇಡಿಕೆಯ ಶಿಕ್ಷಣದ ಪಠ್ಯಕ್ರಮ ಜಾರಿ, ಸಂಶೋಧನೆ ಮತ್ತು ನಾವೀನ್ಯತೆಯ ಸಂಸ್ಕೃತಿಯನ್ನು ಯುವ ಪೀಳಿಗೆಯಲ್ಲಿ ಬೆಳಸುವತ್ತ ಕ್ರಾಂತಿಕಾರಿ ಹೆಜ್ಜೆಗಳನ್ನು ಇಡುತ್ತ ಕೈಗಾರಿಕಾ ಹಾಗೂ ವಿದ್ಯಾಸಂಸ್ಥೆಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಅನೇಕ ಕ್ರಾಂತಿಕಾರಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ ಪರಿಣಾಮ ವಿ ತಾ ವಿ ಸತತ ಎರಡನೇ ಬಾರಿಗೆ ಇಂತಹ ಪ್ರತಿಷ್ಠಿತ ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ತನ್ನದಾಗಿಸಿದೆ.
ಈ ಸುಸಂದರ್ಭದಲ್ಲಿ , ವಿ ತಾ ವಿ, ಬೆಳಗಾವಿ ಕುಲಪತಿಗಳಾದ ಡಾ. ಎಸ್ ವಿದ್ಯಾಶಂಕರ್ ಹಾಗೂ ಕುಲಸಚಿವರು, ಕುಲಸಚಿವರು ಮೌಲ್ಯಮಾಪನ ಅವರು ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಮತ್ತು ಇದಕ್ಕೆ ಕಾರಣರಾದ ಎಲ್ಲರಿಗೂ ಶುಭಕೋರಿ ಅಭಿನಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ