Latest

ಹಣ ವಂಚನೆ ಪ್ರಕರಣ: ಜ್ಯುವೆಲ್ಲರಿ ಸಂಸ್ಥೆಯ 26 ಕೋಟಿ ವಶಕ್ಕೆ ಪಡೆದ ಇ.ಡಿ.

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಬ್ಯಾಂಕ್‌ಗೆ ಹಣ ವಂಚನೆ ಮಾಡಿದ ಪ್ರಕರಣದಲ್ಲಿ ಮೆ. ಅಟ್ಲಾಸ್ ಜ್ಯುವೆಲ್ಲರಿ ಸಂಸ್ಥೆಯ ೨೬.೫೯ ಕೋಟಿ ರೂ. ಸೊತ್ತನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದಿದೆ.

ಕೇರಳ ತ್ರಿಶೂರ್‌ನಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಎಂ. ಎಂ. ರಾಮಚಂದ್ರನ್ ಹಾಗೂ ಇಂದಿರಾ ರಾಮಚಂದ್ರನ್ ಅವರ ವಿರುದ್ಧ ಬ್ಯಾಂಕ್‌ಗೆ ಹಣ ವಂಚನೆಯ ಪೊಲೀಸ್ ದೂರು ದಾಖಲಾಗಿತ್ತು.

ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಇ.ಡಿ. ಅಧಿಕಾರಿಗಳು ಅಟ್ಲಾಸ್ ಜ್ಯುವೆಲ್ಲರಿ ಸಂಸ್ಥೆಯ ಬೆಂಗಳೂರು, ಮುಂಬೈ ಮತ್ತು ದೆಹಲಿಯ ಕಚೇರಿಗಳ ಮೇಲೆ ದಾಳಿ ನಡೆಸಿ ಚಿನ್ನದ ಆಭರಣಗಳು ಮತ್ತು ನಗದು ಸೇರಿ ೨೬ ಕೋಟಿಗೂ ಹೆಚ್ಚಿನ ಸೊತ್ತನ್ನು ವಶಕ್ಕೆ ಪಡೆದಿದೆ.

ನಕಲಿ ದಾಖಲೆಗಳು

ಅಟ್ಲಾಸ್ ಜ್ಯುವೆಲ್ಲರಿ ಸಂಸ್ಥೆಯ ಮುಖ್ಯಸ್ಥರು ಬ್ಯಾಂಕಿಗೆ ನಕಲಿ ದಾಖಲೆಗಳನ್ನು ನೀಡಿ ೨೪೨ ಕೋಟಿ ರೂ.  ಸಾಲ ಪಡೆದಿದ್ದರು. ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ದಾಖಲೆಗಳನ್ನು ಪರಿಶೀಲಿಸಿದಾಗ ನಕಲಿ ಆಗಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್‌ನವರು ಕೇರಳದಲ್ಲಿ ಪೊಲೀಸ್ ದೂರು ನೀಡಿದ್ದರು. ದೂರು ಆಧರಿಸಿ ಇಡಿ ಅಧಿಕಾರಿಗಳು ತನಿಖೆ ನಡೆಸಿದ್ದಾರೆ.

ವಿದ್ಯಾರ್ಥಿನಿಯನ್ನು ತಬ್ಬಿ ಮುದ್ದಾಡಿದ ಹೆಡ್ ಮಾಸ್ತರ್, ಸಾರ್ವಜನಿಕರ ಆಕ್ರೋಶ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button