
ಪ್ರಗತಿವಾಹಿನಿ ಸುದ್ದಿ: ಸರಕಾರಿ, ಅನುದಾನಿತ ಪದವಿ ಕಾಲೇಜಿನಲ್ಲಿ ಶೈಕ್ಷಣಿಕ ಕಾರ್ಯಾಗಾರದ ಹೆಸರಿನಲ್ಲಿ ಪಡೆಯುತ್ತಿದ್ದ ಅನ್ಯ ಕಾರ್ಯ ನಿಮಿತ್ತದ ರಜೆಯನ್ನು ಒಂದು ಸೆಮಿಸ್ಟರ್ ನಲ್ಲಿ ನಾಲ್ಕು ರಜೆಗೆ ಮಿತಿಗೊಳಿಸಿ ಕಾಲೇಜು ಶಿಕ್ಷಣ ಇಲಾಖೆ ಆದೇಶಿಸಿದೆ.
ಈ ರಜೆಯನ್ನು ಮೊದಲು ಆಯಾ ಕಾಲೇಜಿನ ಪ್ರಾಂಶುಪಾಲರು ಮಂಜೂರು ಮಾಡುತ್ತಿದ್ದರು. ಆದರೆ, ಇದೀಗ ಹೊಸ ಆದೇಶದ ಪ್ರಕಾರ ಆ ಹೊಣೆಯನ್ನು ಪ್ರಾಂಶುಪಾಲರಿಂದ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕರಿಗೆ ವರ್ಗಾಯಿಸಲಾಗಿದೆ.
ಈ ಹಿಂದೆ ರಜೆ ತೆಗೆದುಕೊಳ್ಳಲು ಯಾವುದೇ ಲಿಮಿಟ್ ಇರ್ಲಿಲ್ಲ. ಪ್ರಾಂಶುಪಾಲರ ಮಟ್ಟದಲ್ಲೇ ರಜೆ ನಿರ್ಧರಿತವಾಗುತ್ತಿದ್ದರಿಂದ ರಜೆ ಹೆಚ್ಚಾಗಿ ತೆಗೆದುಕೊಳ್ಳಲಾಗಿತ್ತು. ಇದ್ರಿಂದಾಗಿ ತರಗತಿಗೆ ಸಮಸ್ಯೆಯಾಗುತ್ತಿತ್ತು.
ಈ ಹಿನ್ನೆಲೆಯಲ್ಲಿ ಹಳೆಯ ಪದ್ಧತಿ ಬದಲಾಯಿಸಿ ಆದೇಶ ಹೊರಡಿಸಲಾಗಿದೆ.