Kannada NewsKarnataka NewsLatest

ದೇವಸ್ಥಾನಗಳಿಗೆ ಆರ್ಥಿಕ ನೆರವು: ಚೆಕ್ ವಿತರಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್

​ಪ್ರಗತಿವಾಹಿನಿ ಸುದ್ದಿ, ​ಬೆಳಗಾವಿ –  ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಾಂಬ್ರಾ ಗ್ರಾಮದ ಶ್ರೀ ಬೀರದೇವರ ಹಾಗೂ ಶ್ರೀ ವಿಠ್ಠಲ ರುಕ್ಮಿಣಿ ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ಆಯಾ ದೇವಸ್ಥಾನಗಳ ಕಮೀಟಿಯವರಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಧನಸಹಾಯದ ಚೆಕ್ ಗಳನ್ನು ವಿತರಿಸಿದರು.
​ಗ್ರಾಮೀಣ ಕ್ಷೇತ್ರದ ಎಲ್ಲ ದೇವಸ್ಥಾನಗಳನ್ನು‌ ಅಭಿವೃದ್ಧಿ ಪಡಿಸುವ ದೃಷ್ಟಿಯಿಂದ ಶಾಸಕರ ಅನುದಾನದಲ್ಲಿ​ ಹಾಗೂ ಕೆಲವೆಡೆ ವಯಕ್ತಿಕವಾಗಿ ಕೂಡ ಲಕ್ಷ್ಮಿ ಹೆಬ್ಬಾಳಕರ್ ನೆರವು ನೀಡುತ್ತಿದ್ದಾರೆ. ಶ್ರೀ ಬೀರದೇವರ ದೇವಸ್ಥಾನಕ್ಕೆ ​6.50 ಲಕ್ಷ ರೂ,ಗಳ ಪೈಕಿ​ ಮೊದಲ ಕಂತಾಗಿ​ ​3.50 ಲಕ್ಷ ಹಾಗೂ ಶ್ರೀ ವಿಠ್ಠಲ ರುಕ್ಮಿಣಿ ದೇವಸ್ಥಾನಕ್ಕೆ ​3.50 ಲಕ್ಷ ರೂ,ಗಳ ಪೈಕಿ ​ಮೊದಲ ಕಂತಾಗಿ 1.95 ಲಕ್ಷ ರೂ,ಗಳ ಚೆಕ್ ಗಳನ್ನು ಆಯಾ ದೇವಸ್ಥಾನಗಳ ಕಮೀಟಿಯವರಿಗೆ ಹಸ್ತಾಂತರಿಸಿ​ದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ನಾಗೇಶ ದೇಸಾಯಿ, ಗ್ರಾಮ ಪಂಚಾಯತಿಯ ಅಧ್ಯಕ್ಷ, ಉಪಾಧ್ಯಕ್ಷರು, ಸರ್ವ ಸದಸ್ಯರು, ಆಯಾ ದೇವಸ್ಥಾನಗಳ ಕಮೀಟಿಯವರು,  ಕಾರ್ಯಕರ್ತರು ಉಪಸ್ಥಿತರಿದ್ದರು.

Related Articles

Back to top button