ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ, ಬಾಗಲಕೋಟೆ, ಸವದತ್ತಿ, ಹುಬ್ಬಳ್ಳಿ-ಧಾರವಾಡ, ನವಲಗುಂದ, ಗೋಕಾಕ, ರಾಮದುರ್ಗ ಹಾಗೂ ಮಿಧೋಳ ತಾಲೂಕಿನ ಹಾದು ಹೋಗಿರುವ ಇರುವ 220ಕೆವಿ. ಬಿನ್ನಾಳ-ಸವದತ್ತಿ-ಮಹಾಲಿಂಗಪೂರ ಒಂಟಿ ವಿದ್ಯುತ್ ಪ್ರಸರಣ ಮಾರ್ಗದ ಬದಲಾಗಿ 125.252 ಕಿಮೀ ಉದ್ದದ ಜೋಡಿ ವಿದ್ಯುತ್ ಪ್ರಸರಣ ಮಾರ್ಗವನ್ನು ನಿರ್ಮಿಸಲಾಗಿದೆ.
ಸದರಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನಲ್ಲಿ ಹಾದು ಹೋಗಿರುವ ಹಾಲಿ ಇರುವ 220ಕೆ.ವಿ ಬಿನ್ನಾಳ- ಮಹಾಲಿಂಗಪೂರ ವಿದ್ಯುತ್ ಪ್ರಸರಣ ಮಾರ್ಗದಿಂದ ಈಗಿರುವ 220/110/11 ಕೆ.ವಿ ಸವದತ್ತಿ ವಿದ್ಯುತ್ ಕೇಂದ್ರದಿಂದವರೆಗೆ ಜೋಡಿ ಮೇಲೆ ಹೊಸದಾಗಿ 10.552ಕಿಮೀ ಉದ್ದದ ಲೀಲೋ ವಿದ್ಯುತ್ ಪ್ರಸರಣ ಮಾರ್ಗವನ್ನು ನಿರ್ಮಿಸಲಾಗಿದೆ.
ಸದರಿ 220 ಕೆವಿ ವಿದ್ಯುತ್ ಪ್ರಸರಣ ಮಾರ್ಗವು ಹುಬ್ಬಳ್ಳಿ ತಾಲ್ಲೂಕಿನ ಬಿನ್ನಾಳ, ಯಲ್ಲಾಪೂರ, ಬೊಮ್ಮಪುರ, ನಾಗಶೆಟ್ಟಿಕೊಪ್ಪ, ಕೇಶ್ವಾಪೂರ, ಬೆಂಗೇರಿ, ಗೋಪನಕೊಪ್ಪ ಹಾಗೂ ಸುಳ್ಯ, ಧಾರವಾಡ ತಾಲ್ಲೂಕಿನ ಹೆಬ್ಬಾಳ ಹಾಗೂ ತಲವಾಯಿ, ನವಲಗುಂದ ತಾಲ್ಲೂಕಿನ ತಲೆಮೊರಬ, ಮೊರಬ, ಗುಮ್ಮನಗೋಳ, ಸವದತ್ತಿ ತಾಲ್ಲೂಕಿನ ಬೆಟಸೂರ, ಸವದತ್ತಿ ಕುರವಿನಕೊಪ್ಪ, ಕಟಮಳ್ಳಿ, ಯಕ್ಕೇರಿ, ಶಿಂಧೋಗಿ, ಹಿರೂರು, ತೆಗ್ಗಿಹಾಳ, ಜಕ್ಕಬಾಳ, ಯಡ್ರಾವಿ, ರಾಮದುರ್ಗ ತಾಲ್ಲೂಕಿನ ಚುಂಚನೂರ, ಪದಮಂಡಿ, ಕಟಕೋಳ, ಕೆಸರಗೊಪ್ಪ, ಎಮ್.ಚಂದರಗಿ, ಗುಡ್ಡಕೊಪ್ಪ, ಬಾಗೋಜಿಕೊಪ್ಪ, ಹಿರೇಕೊಪ್ಪ, ಕೆ.ಎಸ್. ಹುಲಕುಂದ, ಗೋಕಾಕ ತಾಲೂಕಿನ ಯಾದವಾಡ, ಯರಗುದ್ರಿ, ಅವರಾದಿ, ಮುಧೋಳ ತಾಲ್ಲೂಕಿನ ಅಕ್ಕಿಮರಡಿ, ಬೆಳಗಲಿ, ಮಹಾಲಿಂಗಪೂರ ಅಕ್ಕಪಕ್ಕದ ಹದ್ದಿನಲ್ಲಿ ಬರುವ ಹಳ್ಳಿಗಳು ಮತ್ತು ಸರಹದ್ದಿನ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ಹಾಯ್ದು ಹೋಗುತ್ತದೆ.
ವಿದ್ಯುತ್ ಪ್ರಸರಣ ಮಾರ್ಗವನ್ನು ಜುಲೈ.01 ರಂದು ಇಲ್ಲವೆ ತದನಂತರ ಯಾವುದೇ ಕ್ಷಣದಲ್ಲಿ ವಿದ್ಯುತ್ತನ್ನು ಹರಿಬಿಡಲಾಗುವದು ಕಾರಣ ವಿದ್ಯುತ್ ಗೋಪುರಗಳನ್ನು ಹತ್ತುವುದಾಗಲಿ ಅಥವಾ ತಂತಿಗಳನ್ನು ಮುಟ್ಟುವುದಾಗಲಿ ಹಸಿರು ಟೊಂಗೆಗಳನ್ನು ಎಸೆಯುವುದಾಗಲಿ ಮತ್ತು ಲೈನ್ ಕೆಳಗಡೆ ದನಕರುಗಳನ್ನು ಕಟ್ಟುವುದಾಗಲಿ, ಗಿಡಮರಗಳನ್ನು ನೆಡುವುದಾಗಲಿ, ಮನೆ/ಗುಡಿಸಲುಗಳನ್ನು ನಿರ್ಮಿಸುವುದಾಗಲಿ ಪ್ರಾಣಾಪಯವಾಗಬಹುದು ಎಂದು ಸಾರ್ವಜನಿಕರಿಗೆ ತಿಳಿಸಲಾಗಿದೆ.
ಒಂದು ವೇಳೆ ಇಂತಹ ಕೃತ್ಯಗಳನ್ನು ಯಾರಾದರು ಎಸಗಿದಲ್ಲಿ ಮುಂದೆ ಒದಗಬಹುದಾದ ಅಪಾಯಗಳಿಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತವು ಜವಾಬ್ದಾರಿಯಾಗಿರುವುದಿಲ್ಲ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ಬೃಹತ್ ಕಾಮಗಾರಿ ವಿಭಾಗ ಕಾರ್ಯನಿರ್ವಾಹಕ ಅಭಿಯಂತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ